
ಹೈದರಾಬಾದ್: ಇತ್ತೀಚೆಗೆ 2025 ರ ವರ್ಷಕ್ಕೆ ರೈಲ್ವೆ ನೇಮಕಾತಿ ಮಂಡಳಿಯು ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಿದ್ದು ಈ ಅಧಿಸೂಚನೆಯಡಿಯಲ್ಲಿ, ದೇಶಾದ್ಯಂತ ರೈಲ್ವೆ ಪ್ರದೇಶಗಳಲ್ಲಿ ಒಟ್ಟು 8,875 ರೈಲ್ವೆ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿ ನಿರುದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ.
ತಾಂತ್ರಿಕೇತರ ಜನಪ್ರಿಯ ವರ್ಗಗಳ ಅಡಿಯಲ್ಲಿ ಎಲ್ಲಾ ಖಾಲಿ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿದ್ದು ಒಟ್ಟು ಹುದ್ದೆಗಳಲ್ಲಿ, 5,817 ಹುದ್ದೆಗಳು ಪದವಿ ಹಂತದಲ್ಲಿವೆ ಮತ್ತು 3,058 ಹುದ್ದೆಗಳು ಪದವಿಪೂರ್ವ ಹಂತದಲ್ಲಿವೆ.
ಶೀಘ್ರದಲ್ಲೇ ರೈಲ್ವೆ ನೇಮಕಾತಿ ಮಂಡಳಿ ಅರ್ಹತಾ ಮಾನದಂಡಗಳು, ವಲಯವಾರು ಖಾಲಿ ಹುದ್ದೆಗಳು, ಆಯ್ಕೆ ವಿಧಾನ, ವಯಸ್ಸಿನ ಮಿತಿ, ಪಠ್ಯಕ್ರಮ ಮುಂತಾದ ಸಂಪೂರ್ಣ ವಿವರಗಳೊಂದಿಗೆ ವಿವರವಾದ ಅಧಿಸೂಚನೆಯನ್ನು ಬಿಡುಗಡೆ ಮಾಡಲಿದೆ. ಇತರ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ.






















































