
ಬೆಂಗಳೂರು: ಇದೀಗ ನವೆಂಬರ್ 2ರಿಂದ ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೋಡ್ ಘಾಟ್ ಸೆಕ್ಷನ್ನಲ್ಲಿ ರೈಲ್ವೇ ಕಾಮಗಾರಿ ಆರಂಭಗೊಳ್ಳುತ್ತಿದ್ದು ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲು ಸೇವೆ ರದ್ದಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ.
ಬೆಂಗಳೂರು-ಮಂಗಳೂರು ರೈಲ್ವೇ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ನವೆಂಬರ್ 2 ರಿಂದ ಡಿಸೆಂಬರ್ 15ರ ವರೆಗೆ ಕಾಮಗಾರಿ ನಡೆಯಲಿದ್ದು ಹೀಗಾಗಿ ಈ ಸಮಯದಲ್ಲಿ ಹಲವು ರೈಲು ಸಂಚಾರ ರದ್ದಾಗುತ್ತಿದೆ. ಪ್ರತಿ ದಿನ ನಾಲ್ಕು ಗಂಟೆಗಳ ಕಾಲ ಲೈನ್ ಬ್ಲಾಕ್ ತೆರೆದುಕೊಳ್ಳಲಿದೆ.
- ರೈಲು ಸಂಖ್ಯೆ 16539 ಯಶವಂತಪುರ–ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು ಮೊದಲು 01.11.2025 ರವರೆಗೆ ರದ್ದುಗೊಂಡಿತ್ತು. ಈಗ 08.11.2025 ರಿಂದ 13.12.2025 ರವರೆಗೆ ರದ್ದುಗೊಳ್ಳಲಿದೆ.
- ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್–ಯಶವಂತಪುರ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು ಮೊದಲು 02.11.2025 ರವರೆಗೆ ರದ್ದುಗೊಂಡಿತ್ತು. ಈಗ 09.11.2025 ರಿಂದ 14.12.2025 ರವರೆಗೆ ರದ್ದುಗೊಳ್ಳಲಿದೆ.
- ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ಜಂಕ್ಷನ್ ಗೋಮಟೇಶ್ವರ ಟ್ರೈನ್-ವೀಕ್ಲಿ ಎಕ್ಸ್’ಪ್ರೆಸ್ ಮೊದಲು 30.10.2025 ರವರೆಗೆ ರದ್ದುಗೊಂಡಿತ್ತು. ಈಗ 02.11.2025 ರಿಂದ 14.12.2025 ರವರೆಗೆ ರದ್ದುಗೊಳ್ಳಲಿದೆ.
- ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್–ಯಶವಂತಪುರ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ಮೊದಲು 30.10.2025 ರವರೆಗೆ ರದ್ದುಗೊಂಡಿತ್ತು. ಈಗ 03.11.2025 ರಿಂದ 15.12.2025 ರವರೆಗೆ ರದ್ದುಗೊಳ್ಳಲಿದೆ.
- ರೈಲು ಸಂಖ್ಯೆ 16515 ಯಶವಂತಪುರ – ಕಾರವಾರ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ಮೊದಲು 31.10.2025 ರವರೆಗೆ ರದ್ದುಗೊಂಡಿತ್ತು. ಈಗ 03.11.2025 ರಿಂದ 15.12.2025 ರವರೆಗೆ ರದ್ದುಗೊಳ್ಳಲಿದೆ.
- ರೈಲು ಸಂಖ್ಯೆ 16516 ಕಾರವಾರ – ಯಶವಂತಪುರ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ಮೊದಲು 01.11.2025 ರವರೆಗೆ ರದ್ದುಗೊಂಡಿತ್ತು. ಈಗ 04.11.2025 ರಿಂದ 16.12.2025 ರವರೆಗೆ ರದ್ದುಗೊಳ್ಳಲಿದೆ.
ಇದಲ್ಲದೆ ಭಾರಿ ಮಳೆಯ ಕಾರಣ ರದ್ದಾಗಿದ್ದ ಮಂಗಳೂರು ಬೆಂಗಳೂರು ಬೆಳಗಿನ ರೈಲುಗಳ ರದ್ದು ನಿರ್ಧಾರವನ್ನು ಕಳೆದ ತಿಂಗಳು ವಿಸ್ತರಣೆ ಮಾಡಲಾಗಿದೆ. ವಿದ್ಯುದ್ದೀಕರಣ ಕಾಮಗಾರಿ ಹಿನ್ನಲೆಯಲ್ಲಿ ಈ ರೈಲು ಸಂಚಾರವನ್ನು ಕೂಡ ಡಿಸೆಂಬರ್ 16ರ ವರೆಗೆ ರದ್ದು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.



















































