28.9 C
Udupi
Monday, May 4, 2026
spot_img
spot_img
HomeBlogರಾಷ್ಟ್ರೀಯ ಮಟ್ಟದ MEWA INDIA 2025 ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಲಿರುವ ರಾಹುಲ್ ಕಾಮತ್, ರಜತ್ ಕಾಮತ್...

ರಾಷ್ಟ್ರೀಯ ಮಟ್ಟದ MEWA INDIA 2025 ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಲಿರುವ ರಾಹುಲ್ ಕಾಮತ್, ರಜತ್ ಕಾಮತ್ ಅವರಿಗೆ ಅಭಿನಂದನೆಗಳು – ವಿ ಸುನಿಲ್‌ ಕುಮಾರ್


ಕಾರ್ಕಳ: ಫೆ.12 – JIO World ಸೆಂಟರ್ ಮುಂಬೈನಲ್ಲಿ ಫೆಬ್ರವರಿ 12 ಹಾಗೂ 13ರಂದು ರಾಷ್ಟ್ರೀಯ ಮಟ್ಟದ ಡ್ರೈಫ್ರಟ್ಸ್ ಎಕ್ಸ್‌ಪೋ MEWA INDIA 2025 ಕಾರ್ಯಕ್ರಮ ನಡೆಯುತ್ತಿದ್ದು ದೇಶದ ಉನ್ನತ ಸ್ಥಾನದಲ್ಲಿರುವ 100 ಒಣ ಹಣ್ಣುಗಳ ಮಾರಾಟಗಾರರ ಕಾನ್ಸರೆನ್ಸ್ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮದಲ್ಲಿ ನಮ್ಮ ಕಾರ್ಕಳದ ಪ್ರತಿಷ್ಟಿತ ಸಂಸ್ಥೆಯೆನಿಸಿಕೊಂಡ ಬೋಳಾಸ್ ಆಗೋ ಪ್ರೈಲಿ. ಸಂಸ್ಥೆಯ ಮುಖ್ಯಸ್ಥರಾದ ರಾಹುಲ್ ಕಾಮತ್ ಮತ್ತು ರಜತ್ ಕಾಮತ್ ರವರು ಭಾಗವಹಿಸಿ, ರಾಷ್ಟ್ರ ಮಟ್ಟದ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.


ಗೇರು ಉದ್ಯಮದಲ್ಲಿ ಕಾರ್ಕಳವು ಈಗಾಗಲೇ ದೇಶದಾದ್ಯಂತ ಹೆಸರುವಾಸಿಯಾಗಿದ್ದು ಅದರಲ್ಲೂ ಬೋಳಾಸ್ ಕುಟುಂಬಸ್ಥರು ಗೇರು ಉದ್ಯಮದಲ್ಲಿ ಅನೇಕ ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡು ಒಂದು ಬ್ಯಾಂಡ್ ಸಂಸ್ಥೆಯನ್ನೇ ಸ್ಥಾಪಿಸಿದ್ದಾರೆ. ಈ ಸಂಸ್ಥೆಗಳಲ್ಲಿ ಸಾವಿರಾರು ಜನರಿಗೆ ಉದ್ಯೋಗವಕಾಶವನ್ನು ನೀಡಿ, ಅನ್ನದಾತರೆನಿಸಿಕೊಂಡಿದ್ದು ಕಾರ್ಕಳದ ಸಮಗ್ರ ಆರ್ಥಿಕತೆಗೆ ತಮ್ಮ ಉದ್ಯಮದ ಮೂಲಕ ಬಲ ತುಂಬಿದ್ದಾರೆ. ಉದ್ಯಮದ ಜೊತೆ ಜೊತೆಗೆ ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ.


ಇದೀಗ ದೇಶದ ಪ್ರಮುಖ ಡ್ರೈ ಫೂಟ್ಸ್ ಉತ್ಪಾದಕರ ಸಮ್ಮೇಳನದಲ್ಲಿ ನಮ್ಮ ಕಾರ್ಕಳದ ಬೋಳಾಸ್ ಸಂಸ್ಥೆಯ ಮುಖ್ಯಸ್ಥರು ಪ್ರತಿನಿಧಿಸಿ, ಮುಖ್ಯ ಭಾಷಣ ಮಾಡಲಿರುವುದು, ನಮ್ಮ ಕಾರ್ಕಳ ಸೇರಿದಂತೆ ಕರ್ನಾಟಕಕ್ಕೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ, ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿರುವ ಇಬ್ಬರಿಗೂ ಅಭಿನಂದನೆಗಳು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page