
ಕಾರ್ಕಳ: ಯೋಗಾಸನ ಭಾರತ್ ಕೇಂದ್ರ ಸರಕಾರದ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಹಾಗೂ ಅಸ್ಮಿತೆ ಖೇಲೋ ಇಂಡಿಯಾ ಮಹಿಳಾ ಯೋಗಾಸನ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಯೋಗ ಪಟುಗಳು 15 ಚಿನ್ನ, 10 ಬೆಳ್ಳಿ ಹಾಗೂ 7 ಕಂಚಿನ ಪದಕಗಳನ್ನು ಗಳಿಸಿ ಒಟ್ಟು 15 ಮಂದಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರ ಜೊತೆ ಕಾರ್ಕಳದ ಯೋಗ ಶಿಕ್ಷಕರಾದ ಕೆ ನರೇಂದ್ರ ಕಾಮತ್, ಕೆ. ಅಶೋಕ ಕುಮಾರ್ ಮತ್ತು ಶ್ರೀಮತಿ ಮಮತಾ ಗಣೇಶ್ ಇವರು ತೀರ್ಪುಗಾರರಾಗಿ ಹಾಗೂ ಲತಾಮದ್ಯಸ್ಥ ಮತ್ತು ಶ್ರೀ ರಾಘವೇಂದ್ರ ಭಟ್ ತಂಡದ ವ್ಯವಸ್ಥಾಪಕರಾಗಿ ಭಾಗವಹಿಸಿದರು.