
ಕಾರವಾರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅಲೋಕ್ ಶೆಟ್ಟಿ ‘ಕಟಾ’ ಪ್ರಥಮ, ಕುಮಿಟೆ ಪ್ರಥಮ, ಖುಷಿ ‘ಕಟಾ’ದಲ್ಲಿ ಪ್ರಥಮ, ‘ಕುಮಿಟೆ ಪ್ರಥಮ, ಅಮೋಘ ಶೆಟ್ಟಿ ‘ಕಟಾ’ದಲ್ಲಿ ಪ್ರಥಮ, ‘ಕುಮಿಟೆ’ಯಲ್ಲಿ ದ್ವಿತೀಯ ಸ್ಥಾನ, ಮೇಘನ್ ‘ಕುಮಿಟೆ’ಯಲ್ಲಿ ಪ್ರಥಮ, ‘ಕಟಾ’ದ್ವಿತೀಯ, ಪ್ರೀಮಾ ರಿಶಾ ಲೋಬೊ ‘ಕಟಾ’ ಪ್ರಥಮ, ಕುಮಿಟೆ ದ್ವಿತೀಯ, ಪ್ರಜ್ವಲ್ ‘ಕಟಾ’ ದ್ವಿತೀಯ, ಕುಮಿಟೆ ದ್ವಿತೀಯ, ಗಗನ್ ಸೂರ್ಯ ‘ಕಟಾ’ ತೃತೀಯ, ಕುಮಿಟೆ ತೃತೀಯ, ಆಯುಷ್ ‘ಕಟಾ’ತೃತೀಯ, ಕುಮಿಟೆ ತೃತೀಯ, ಸ್ಥಾನವನ್ನು ಗಳಿಸಿರುತ್ತಾರೆ.
ಇವರನ್ನು ಶಾಲಾ ಅಧ್ಯಕ್ಷರಾದ ಜೆಸಿ ಚಿತ್ತರಂಜನ್ ಶೆಟ್ಟಿ ಯವರು, ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ರಾಜ್ ರವರು ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದರು.





