30.9 C
Udupi
Monday, April 13, 2026
spot_img
spot_img
HomeBlogರಜತ ಮಹೋತ್ಸವ ಸಂಭ್ರಮದಲ್ಲಿ "ಪುಣೆ ತುಳುಕೂಟ"

ರಜತ ಮಹೋತ್ಸವ ಸಂಭ್ರಮದಲ್ಲಿ “ಪುಣೆ ತುಳುಕೂಟ”

ತುಳು ಭಾಷೆ, ಸಂಸ್ಕೃತಿಯ ಉಳಿವಿಗಾಗಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ತಂಡ

ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಪುತ್ತೂರು, ತುಳುಕೂಟ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು ಮುಂದಾಳತ್ವದಲ್ಲಿ..,

ರಜತ ಮಹೋತ್ಸವ ಸಂಭ್ರಮದಲ್ಲಿರುವ ಪುಣೆ ತುಳುಕೂಟವು ರಜತ ಮಹೋತ್ಸವ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದು ಜುಲೈ 11ರ ಗುರುವಾರದಂದು ಪುಣೆ ವಾರ್ಜೆಯಲ್ಲಿರುವ ಶಿವರ್ಶ್ ಹೋಟೆಲ್ ನ ಬ್ಯಾಂಕ್ವೇಟ್ ಹಾಲ್ ನಲ್ಲಿ ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ಪುಣೆ ತುಳುಕೂಟದ ಮತ್ತು ಮುಂದೆ ನಡೆಯಲಿರುವ ರಜತ ಮಹೋತ್ಸವದ ಬಗ್ಗೆ ಪ್ರಾಸ್ತಾವಿಕವಾಗಿ ಸಭೆಯಲ್ಲಿ ರಜತ ಮಹೋತ್ಸವದ ಯಶಸ್ವಿಗೆ ಸಮಿತಿ ರಚನೆಯ ಬಗ್ಗೆ ತಿಳಿಸಿದರು.

ರಜತ ಮಹೋತ್ಸವ ಸಮಿತಿಗೆ ಉಪಾಧ್ಯಕ್ಷರುಗಳಾಗಿ ಸದಾನಂದ ನಾಯಕ್ ಮಾಳ, ಸಂತೋಷ್ ಶೆಟ್ಟಿ ಮಟ್ಟಾರು, ಸದಾಶಿವ್ ಸಾಲ್ಯಾನ್ ಖುಷ್ಬೂ, ಹರೀಶ್ ಶೆಟ್ಟಿ ಕುರ್ಕಾಲ್, ವಿಶ್ವನಾಥ್ ಪೂಜಾರಿ ಅಂಬಿಕಾ, ಪ್ರಧಾನ ಕಾರ್ಯದರ್ಶಿಯಾಗಿ ರೋಹಿತ್ ಶೆಟ್ಟಿ ನಗ್ರಿ ಗುತ್ತು, ಕೋಶಾಧಿಕಾರಿಯಾಗಿ ಸಿಎ. ಮನೋಹರ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾಗಿ ಶರತ್ ಭಟ್ ಅತ್ರಿವನ, ಸಚ್ಚಿದಾನಂದ ಶೆಟ್ಟಿ, ಜೊತೆ ಕೋಶಾಧಿಕಾರಿಯಾಗಿ ಹರೀಶ್ ಶೆಟ್ಟಿ ಕಸ್ಬಾ, ಸ್ಮರಣ ಸಂಚಿಕೆ ಸಂಪಾದಕ ಮಂಡಳಿಗೆ ಹರೀಶ್ ಮೂಡಬಿದ್ರಿ, ಸುಧಾಕರ ಶೆಟ್ಟಿ ಕೆಮ್ತೂರು, ವಿಕೇಶ್ ರೈ ಶೇಣಿ, ವಿಠಲ್ ಮೂಲ್ಯ, ಪದ್ಮಾಕ್ಷಿ ಎಸ್. ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.

ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಆಯ್ಕೆಯಾದ ನೂತನ ಸಮಿತಿಯ ಪದಾಧಿಕಾರಿಗಳಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ರಜತ ಮಹೋತ್ಸವದ ಮುಂದಿನ ಕಾರ್ಯ ರೂಪು ರೇಷೆಗಳ ಬಗ್ಗೆ ಕಾರ್ಯದರ್ಶಿ ರೋಹಿತ್ ಶೆಟ್ಟಿ ವಿವರಿಸಿದರು.

ವೇದಿಕೆಯಲ್ಲಿದ್ದ ಪ್ರಮುಖರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಸಭೆಯಲ್ಲಿ ಉಪಸ್ಥಿತರಿದ್ದ ಸಮಿತಿಯ ಪ್ರಮುಖರಿಗೆ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಸದಾನಂದ ನಾಯಕ್, ಸದಾಶಿವ ಸಾಲ್ಯಾನ್, ಉದಯ್ ಶೆಟ್ಟಿ ಕಳತ್ತೂರು, ರಾಮಣ್ಣ ರೈ ಮೊದಲಾದವರು ರಜತ ಮಹೋತ್ಸವ ಆಚರಣೆಯ ಬಗ್ಗೆ ಶುಭ ಹಾರೈಕೆಗಳನ್ನು ನೀಡಿದರು. ತುಳುಕೂಟದ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಎಣ್ಣೆ ಹೊಳೆ ಸ್ವಾಗತಿಸಿ ಕಾರ್ಯಕ್ರಮದ ನಿರೂಪಣೆ ಮಾಡಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page