
ರಂಗನಪಲ್ಕೆ ಕರಿಕುಮೇರಿ ಪಾತಾವಿನ ಸಂಪರ್ಕ ರಸ್ತೆಯಾದ ಡಾ| ಬಿ.ಆರ್. ಅಂಬೇಡ್ಕರ್ ರಸ್ತೆ ಕಳೆದ ಹಲವು ವರ್ಷಗಳಿಂದಲೂ ತೀವ್ರ ಹದಗೆಟ್ಟಿರುದು ಮಾತ್ರವಲ್ಲದೆ ಅಭಿವ್ರಧಿಯಾಗದೆ ಇರುವುದು ಪಂಚಾಯತ್ ಸದಸ್ಯರ ನಿರ್ಲಕ್ಷವೆ ಕಾರಣವಾಗಿದೆ.
ಕಳೆದ ಒಂದು ವರ್ಷದ ಹಿಂದೆ ಈ ರಸ್ತೆಯಲ್ಲಿ ಪ್ರತಿಭಟನೆ, ಧರಣಿ ಮಾಡಿದರೂ ಬೈಲೂರು-ಕೌಡೂರು ಪಂಚಾಯತಿನ ಯಾವ ಸದಸ್ಯರು ಸ್ಪಂದಿಸಿಲ್ಲ. ಅದೇ ವೇಳೆಗೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಶುಭದ್ ರಾವ್ ರವರು ಸ್ಥಳಕ್ಕೆ ಬಂದು ಧರಣಿ ಮಾಡುವ ಗ್ರಾಮಸ್ಥರಿಗೆ ಭರವಸೆ ಕೊಟ್ಟರು ಮಾತ್ರವಲ್ಲದೆ ನಿರ್ವಹಿಸಿದರು.
ಸ್ಥಳದಲ್ಲಿಯೇ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿರನ್ನು ಸಂಪರ್ಕಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರನ್ನು ಸಂಪರ್ಕಿಸಿ ರಸ್ತೆಯ ಬಗ್ಗೆ ಗಮನ ಸೆಳೆಯುವಂತೆ ಮಾಡಿದರು.
ತೀವ್ರ ಹದಗೆಟ್ಟ ಈ ರಸ್ತೆಯಲ್ಲಿ ನಡೆದಾಡುವುದೆ ಕಷ್ಟಕರವಾಗಿತ್ತು.
ನಂತರ ಗ್ರಾಮಸಭೆಯಲ್ಲಿ ಗ್ರಾಮಸ್ಥರು ದ್ವನಿಯೆತ್ತಿದಾಗ ನಮಗೆ ಅನುದಾನ ಬಿಡುವುದಿಲ್ಲ ಎಂದು ಬೈಲೂರು- ಕೌಡೂರು ಗ್ರಾಮ ಪಂಚಾಯತ್ ಅದ್ಯಕ್ಷರು ಹಾಗೂ ಸದಸ್ಯರು ನೇರ ನುಡಿದರು.
ಕಾರ್ಕಳ ಕಾಂಗ್ರೆಸ್ ನಾಯಕರಾದ ಮುನಿಯಲು ಉದಯ ಕುಮಾರ್ ಶೆಟ್ಟಿ ರವರು ರಸ್ತೆಯ ಪರಿವೀಕ್ಷಣೆ ಮಾಡಿ ಗ್ರಾಮಸ್ಥರನ್ನು ಸಂಪರ್ಕಿಸಿ, ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಡಾ| ಬಿ. ಆರ್. ಅಂಬೇಡ್ಕರ್ ರಸ್ತೆ ಅಭಿವೃದ್ಧಿಯಾಗಿದೆ ಅಲ್ಲದೆ ಇನ್ನೂ 200 ಮೀಟರ್ ಅಭಿವೃದ್ಧಿ ಯಾಗಬೇಕಾಗಿದೆ.
ಈ ರಸ್ತೆ ಹಿಂದೆ ದುಡಿದ ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಶುಭದ್ ರಾವ್ ಬೈಲೂರು- ಕೌಡೂರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಸಂದ್ಯಾ ಶೆಟ್ಟಿ ಅಂತೆಯೆ ಎಲ್ಲಾ ಸಹಕರಿಸಿದ ಗ್ರಾಮಸ್ಥರಿಗೆ, ಗ್ರಾಮೀಣ ಕಾಂಗ್ರೆಸ್ ಮುಖಂಡರಾದ ಅಂತೋನಿ ಮಿರಾಂದಾರವರು ಅಭಿನಂದಿಸಿದ್ದಾರೆ.



















