
ಮಂಡ್ಯ: ಕೆ ಆರ್ ಎಸ್ ಡ್ಯಾಂನಿಂದ 40 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಲಾಗುತ್ತಿದ್ದು, ರಂಗನತಿಟ್ಟಿನಲ್ಲಿ ಬೋಟಿಂಗ್ ಪಾಯಿಂಟ್ ಮುಳುಗಡೆಯಾಗಿದೆ.
ಕಾವೇರಿ ನದಿ ತೀರದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದ್ದು ನದಿ ತಟದ ಪ್ರವಾಸಿ ತಾಣಗಳಿಗೂ ಮುಳುಗಡೆಯ ಆತಂಕ ಎದುರಾಗಿದೆ. ಪಕ್ಷಿಗಳ ಆಶ್ರಯ ತಾಣ ನಡುಗಡ್ಡೆಗಳು ಕೂಡ ಜಲಾವೃತ್ತ ಗೊಂಡಿದ್ದು ಮುಂಜಾಗ್ರತಾ ಕ್ರಮವಾಗಿ ವಿಶ್ವ ಪ್ರಖ್ಯಾತ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.











