
ಹೊಸದಿಲ್ಲಿ: ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಯೆಮೆನ್ ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದು ಆದರೆ ಗಲ್ಲು ಶಿಕ್ಷೆ ರದ್ದಾಗಿದೆ ಎಂದು ವದಂತಿಗಳು ಹರಡುತ್ತಿದ್ದು ಈ ಕುರಿತು ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯವು ನಿಮಿಷಾಪ್ರಿಯ ಶಿಕ್ಷೆ ರದ್ದಾಗಿಲ್ಲ, ಬದಲಾಗಿ ಮುಂದೂಡಲಾಗಿದೆ. ಈ ಸೂಕ್ಷ್ಮ ಪ್ರಕರಣದ ಕುರಿತು ದೃಢೀಕರಿಸದ ವರದಿಗಳು ಹಾಗೂ ವದಂತಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.
“ಭಾರತದ ನಿರಂತರ ಮಾತುಕತೆ ಹಾಗೂ ರಾಜತಾಂತ್ರಿಕ ಪ್ರಯತ್ನಗಳಿಂದ ಜುಲೈ 16ರಂದು ನಿಗದಿಯಾಗಿದ್ದ ನಿಮಿಷ ಪ್ರಿಯ ಅವರ ಗಲ್ಲು ಶಿಕ್ಷೆ ಮುಂದೂಡಿಕೆಯಾಗಿದೆ. ಆದರೆ ರದ್ದಾಗಿದೆ ಎಂದು ಸುಳ್ಳು ಸುದ್ದಿಗಳು ಹರಡಿವೆ. ಈ ಬಗ್ಗೆ ಸಚಿವಾಲಯವೇ ಸ್ಪಷ್ಟನೆ ನೀಡುವವರೆಗೂ ಸುಳ್ಳು ಸುದ್ದಿಗಳನ್ನು ನಂಬಬೇಡಿ” ಎಂದು ವಿದೇಶಾಂಗ ವಕ್ತಾರಾ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.