27.7 C
Udupi
Thursday, April 9, 2026
spot_img
spot_img
HomeBlogಯಾವುದೇ ಕಂಪನಿಯು ಬೆಂಗಳೂರು ತೊರೆಯದಂತೆ ಕರ್ನಾಟಕ ಸರ್ಕಾರ ಖಚಿತಪಡಿಸುತ್ತದೆ : ಡಿಕೆ ಶಿವಕುಮಾರ್ ಭರವಸೆ

ಯಾವುದೇ ಕಂಪನಿಯು ಬೆಂಗಳೂರು ತೊರೆಯದಂತೆ ಕರ್ನಾಟಕ ಸರ್ಕಾರ ಖಚಿತಪಡಿಸುತ್ತದೆ : ಡಿಕೆ ಶಿವಕುಮಾರ್ ಭರವಸೆ

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆ ಅವ್ಯವಸ್ಥೆಯ ಕಾರಣದಿಂದ ಕಂಪನಿಗಳು ನಗರದಿಂದ ಹೊರ ಹೋಗುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿದ್ದು ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳಿಂದ ಯಾವುದೇ ಕಂಪನಿಯು ಐಟಿ ನಗರವನ್ನು ತೊರೆಯದಂತೆ ಕರ್ನಾಟಕ ಸರ್ಕಾರ ಖಚಿತಪಡಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಬೆಂಗಳೂರು ತುಂಬಾ ದೊಡ್ಡದಾಗಿದೆ. ಆದ್ದರಿಂದ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿತ್ತು. ಈ ಬೇಡಿಕೆಗಳನ್ನು ಪೂರೈಸಲು ನಾವು ಐದು ನಿಗಮಗಳನ್ನು ರಚಿಸಿದ್ದು, ದೊಡ್ಡ ಯೋಜನೆಗಳಿಗಾಗಿ ನಾವು ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ತರಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ರಸ್ತೆಗಳನ್ನು ದುರಸ್ತಿ ಮಾಡುವ ಕೆಲಸ ಮುಂದುವರೆದಿದ್ದು ಹಣವನ್ನು ಹಂಚಿಕೆ ಮಾಡಲಾಗಿದೆ. ಗುತ್ತಿಗೆದಾರರು ಕೆಲಸವನ್ನು ಪ್ರಾರಂಭಿಸಿದ್ದು ಅವರಿಗೆ ಕಟ್ಟುನಿಟ್ಟಾದ ಗಡುವನ್ನು ನೀಡಲಾಗಿದೆ. ನಮ್ಮ ಜನರಿಗೆ ಸುರಕ್ಷಿತ ಮತ್ತು ಸುಗಮ ಪ್ರಯಾಣವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದರು.

ಇನ್ನು ಬೆಂಗಳೂರು ತೊರೆಯುವ ಕಂಪನಿಗಳ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಅವರು ನೆಲೆ ಬದಲಾಯಿಸುವ ನಿರ್ಧಾರಗಳು ವ್ಯಾಪಾರ ಸಮಸ್ಯೆಗಳಿಂದಲೂ ಆಗಿರಬಹುದು ಮತ್ತು ಬೆಂಗಳೂರು ನೀಡುವ ಸೌಲಭ್ಯಗಳು ಮತ್ತು ಪ್ರತಿಭೆಗಳಿಂದ ತೃಪ್ತರಾಗದಿದ್ದರೆ ಸ್ಥಳಾಂತರಗೊಳ್ಳಲು ಸ್ವತಂತ್ರರು. ಆದರೆ ಅವರು ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುವುದರಿಂದ ನಿಮ್ಮ ಕೆಲಸ ಆಗದು. ನಾವು ರಾಜ್ಯದ ಜನರಿಗೆ ಸೇವೆ ಸಲ್ಲಿಸಬೇಕು. ಇದನ್ನು ದಾಖಲೆಯಲ್ಲಿ ತೆಗೆದುಕೊಳ್ಳಿ, ಯಾರು ಬೆಂಗಳೂರು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page