
ಹೆಬ್ರಿ :ನಾಳೆಯ ಪ್ರಜೆಗಳು ನೀವುಗಳು. ನಾಳೆಯ ದಿನಗಳು ಸುಂದರವಾಗಬೇಕಾದರೆ ವಿದ್ಯಾರ್ಥಿಗಳಾದ ನೀವೆಲ್ಲರೂ ಒಳ್ಳೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು.ಜವಾಹಾರಲಾಲ್ ನೆಹರೂ ಅವರ ಆದರ್ಶಗಳು ಎಲ್ಲರಿಗೂ ಮಾದರಿ. ದೇಶದ ಮೊದಲ ಪ್ರಧಾನಿಯಾಗಿ ರಾಷ್ಟ್ರದ ಉನ್ನತಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದ ನಾಯಕ ನೆಹರೂರವರು.ಬಾಲ್ಯದಿಂದಲೇ ಉತ್ತಮ ಗುಣಗಳನ್ನು ಬೆಳೆಸಿಕೊಂಡು ಭಾರತ ದೇಶದ ಭವ್ಯ ನಾಗರಿಕರಾಗಿ ಸಮಾಜದಲ್ಲಿ ಉಪಯುಕ್ತ ಕೆಲಸಗಳನ್ನು ಮಾಡುತ್ತ ನಿಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಿಎಂದು ಮುಖ್ಯ ಅಧ್ಯಾಪಿಕೆ ಇಂದಿರಾ ಬಾಯರಿ ಹೇಳಿದರು.
ಅವರು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಮಕ್ಕಳಿಗೆ ಶುಭ ಹಾರೈಸಿ,ಮಾತನಾಡಿದರು.ಇದೇ ಸಂದರ್ಭದಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ, ಬಹುಮಾನ ವಿತರಿಸಲಾಯಿತು. ಶಿಕ್ಷಕ ರಘುಪತಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿ, ಪಿ. ವಿ. ಆನಂದ ವಂದಿಸಿದರು. ಹಿರಿಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ಮಹೇಶ್ ನಾಯ್ಕ್, ಶ್ಯಾಮಲಾ ಕೊಠಾರಿ, ಮಹೇಶ್, ವಿದ್ಯಾರ್ಥಿ ನಾಯಕ ರಂಜಿತ್ ಉಪಸ್ಥಿತರಿದ್ದರು.



















