
ಮಿಸ್ ಯೂನಿವರ್ಸ್ ಕರ್ನಾಟಕ – 2026 ಸೌಂದರ್ಯ ಸ್ಪರ್ಧೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದು, ಸ್ಪರ್ಧೆಯ ವಿಜೇತರಾಗಿ ಲೇಖನ ಹೆಗ್ಡೆ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅರಮನೆ ಮೈದಾನದ ಗಾಯತ್ರಿ ವಿಹಾರ್ ನಲ್ಲಿ ಸ್ಪರ್ಧೆ ನಡೆದಿದ್ದು, ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷೆ ಉದ್ಯಮಿ ಸಮಾಜಸೇವಕಿ ಮಹಿಳಾ ರತ್ನ ಪ್ರಶಸ್ತಿ ವಿಜೇತ ಕಾಂತಿ ಶೆಟ್ಟಿ ಅವರ ಪುತ್ರಿ ಲೇಖನ ಹೆಗ್ಡೆ ಮಿಸ್ ಯುನಿವರ್ಸ್ ಕರ್ನಾಟಕ – 2026 ವಿಜೇತೆಯಾಗಿ ಹೊರಹೊಮ್ಮಿದ್ದಾರೆ.









