
ಮಿಯ್ಯಾರು ಡಿವೈಡರ್ ಬಳಿ, ಇಂದು ಸಂಜೆ ಚಲಿಸುತ್ತಿದ್ದ ಬಸ್ಸಿನಿಂದ ಮಹಿಳೆಯೋರ್ವರು ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.
ಉಡುಪಿಯಿಂದ ಬೆಳ್ತಂಗಡಿ ಸಾಗುತ್ತಿದ್ದ, ವರುಣ್ ಬಸ್ಸಿನ ಬಾಗಿಲ ಬಳಿ ನಿಂತಿದ್ದ ಜಯಂತಿ (63) ಮಹಿಳೆ ಮಿಯ್ಯಾರು ಡಿವೈಡರ್ ಬಳಿ, ರಸ್ತೆಗೆ ಎಸೆಯಲ್ಪಟ್ಟಿದ್ದು, ಅದೇ ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿ ಜಯಂತಿ ಅವರ ಬಲಕೈ ಸಂಪೂರ್ಣ ಹಾನಿಗೊಂಡಿದೆ.
ನಾಲ್ಕು ದಿನಗಳ ಹಿಂದೆ ಇದೇ ಸಂಸ್ಥೆಯ ಬಸ್ ಮತ್ತು ಟೆಂಪೋ ಅಪಘಾತದಲ್ಲಿ ನಾಲ್ಕು ಜನ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದರು.
ಸಾಮಾಜಿಕ ಕಾರ್ಯಕರ್ತ ರಮಾಕಾಂತ್ ಶೆಟ್ಟಿ ಕರಿಮಾರುಕಟ್ಟೆ ಅವರು ತಮ್ಮ ಕಾರಿನಲ್ಲಿ ಜಯಂತಿಯವರನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.



















