25.2 C
Udupi
Sunday, April 12, 2026
spot_img
spot_img
HomeBlogಮಾಳ :ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಹಳೆಪ್ಪಳ್ಳಿಗೆ ಶಾಸಕರ ಭೇಟಿ

ಮಾಳ :ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಹಳೆಪ್ಪಳ್ಳಿಗೆ ಶಾಸಕರ ಭೇಟಿ

ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಹಳೆಪ್ಪಳ್ಳಿ ಮಾಳ ಇಲ್ಲಿಗೆ ಕಾರ್ಕಳದ ಶಾಸಕರು,ಹಾಗು ಜೀರ್ಣೋದ್ದಾರ ಸಮಿತಿಯ ಗೌರವಾದ್ಯಕ್ಷರು ಆದ
ವಿ .ಸುನೀಲ್ ಕುಮಾರ್ ರವರು ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ 5 ಲಕ್ಷ ರೂಪಾಯಿ ಯನ್ನು ಶಾಸಕರ ನಿಧಿಯಿಂದ ಕೊಡುವುದಾಗಿ ಹೇಳಿದರು, ಈ ಹಿಂದೆಯೂ 5 ಲಕ್ಷ ರೂಗಳನ್ನು ನೀಡಿರುವುದನ್ನು ಸ್ಮರಿಸಬಹುದು.

ಹಾಗೆಯೇ ದೇವಸ್ಥಾನ ದ ರಸ್ತೆ ನಿರ್ಮಾಣಕ್ಕಾಗಿ ರೂಪಾಯಿ 50 ಲಕ್ಷ ರೂ.ಗಳನ್ನು ಘೋಷಿಸಿ ಬ್ರಹ್ಮಕಲಶದ ಒಳಗಡೆ ರಸ್ತೆಯನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು ದಿನೇಶ್ ಶೆಟ್ಟಿ, ಹಾಗೂ ಎಲ್ಲಾ ಪದಾಧಿಕಾರಿಗಳು,ಗ್ರಾಮ ಪಂಚಾಯತ್ ಅಧ್ಯಕ್ಷರು ಉಮೇಶ್ ಪೂಜಾರಿ, ಉಪಾಧ್ಯಕ್ಷರು ಶ್ರೀಮತಿ ವಿಮಲಾ ಪೂಜಾರಿ, ಸದಸ್ಯರು ನಿಲೇಶ್ ತೆಂಡೂಲ್ಕರ್, ಮಲ್ಲಿಕಾ ಶೆಟ್ಟಿ ಹಾಗೂ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ವೆಂಕಟೇಶ ಗೋರೆ, ಪದಾಧಿಕಾರಿಗಳು ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page