27.4 C
Udupi
Friday, April 24, 2026
spot_img
spot_img
HomeBlog"ಮಹಿಳೆಯರು ಕಾನೂನು ಬಗ್ಗೆ ತಿಳಿದುಕೊಳ್ಳುವುದು ಅತೀ ಅವಶ್ಯಕ"- ಸಂತೋಷ್ ಕಾರ್ಕಳ ಮಾತಾ ಮರಿಯ ಮಹಾ...

“ಮಹಿಳೆಯರು ಕಾನೂನು ಬಗ್ಗೆ ತಿಳಿದುಕೊಳ್ಳುವುದು ಅತೀ ಅವಶ್ಯಕ”- ಸಂತೋಷ್ ಕಾರ್ಕಳ ಮಾತಾ ಮರಿಯ ಮಹಾ ಸಂಘ ಕಣಜಾರು ಆಶ್ರಯದಲ್ಲಿ ಮಹಿಳೆಯರ ಸಂರಕ್ಷಣೆ ಮತ್ತು ಕಾನೂನು ತಿಳುವಳಿಕೆ ಬಗ್ಗೆ ಮಾಹಿತಿ ಕಾರ್ಯಾಗಾರ

ಮಹಿಳೆಯರು ಕಾನೂನು ಬಗ್ಗೆ ತಿಳಿದುಕೊಳ್ಳುವುದು ಅತೀ ಅವಶ್ಯಕ ಎಂದು ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಕಚೇರಿಯ ಸಂತೋಷ್ ಕಾರ್ಕಳ ರವರು ಹೇಳಿದರು.

ಮಾತಾ ಮರಿಯ ಮಹಾ ಸಂಘ ಕಣಜಾರು ಇವರ ಆಶ್ರಯದಲ್ಲಿ ಮಹಿಳೆಯರ ಸಂರಕ್ಷಣೆ ಮತ್ತು ಕಾನೂನು ತಿಳುವಳಿಕೆ ಇದರ ಬಗ್ಗೆ ಮಹಿಳೆಯರಿಗೆ ಜಾಗ್ರತಿ ಮೂಡಿಸುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಾ ಇಂದಿನ ದಿನಗಳಲ್ಲಿ ಹೆಚ್ಚು ತ್ತಿರುವ ಸೈಬರ್ ಅಪರಾಧಗಳಲ್ಲಿ ಹೆಚ್ಚಾಗಿ ಮಹಿಳೆಯರು ಕೂಡಾ ಮೋಸ ಹೋಗುತ್ತಿದ್ದು ವಿಷಾದನೀಯ.. ಈ ಬಗ್ಗೆ ಅಪರಿಚಿತರ ಮೊಬೈಲ್ ಕರೆ ಬಗ್ಗೆ ಜಾಗ್ರತರಾಗುವಂತೆ. ಸೈಬರ್ ತುರ್ತು ಕರೆ 1930 ಯ ಬಗ್ಗೆ. ಪೊಲೀಸ್ ತುರ್ತು ಕರೆ 112 ರ ಬಗ್ಗೆ ತಿಳಿಸಿದರು ಹಾಗೂ ಮನೆ ಮನೆ ಬಟ್ಟೆ ಮಾರಾಟ. ಚಿನ್ನ ಬೆಳ್ಳಿ ಪಾಲಿಶ್ ಮಾಡುವವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದಲ್ಲದೆ ಭಾರತೀಯ ನಾಗರೀಕ ನ್ಯಾಯ ಸಹಿಂತೆ ಕಾನೂನು ಕಟ್ಟುನಿಟ್ಟಾಗಿದ್ದು ಕಾನೂನಿನ ಅರಿವಿನ ಬಗ್ಗೆ ತಿಳಿದು ಬದುಕುವುದು ಅತೀ ಅವಶ್ಯಕತೆ ಎಂದು ಹೇಳಿದರು.

ವೇದಿಕೆಯಲ್ಲಿ ಕಣಜಾರು ಚರ್ಚ ನ ಧರ್ಮ ಗುರುಗಳಾದ ಫಾದರ್ ಹೆರಾಲ್ಡ್ ಪೀರೇರಾ ರವರು ಉಪಸ್ಥಿತರಿದ್ದರು. ಮಾತ ಮರಿಯ ಸಂಘದ ಅಧ್ಯಕ್ಷರಾದ ಶ್ರೀಮತಿ ಅನಿತಾ ನಜರತ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ. ಸ್ವಾಗತಿಸಿ. ಕಾರ್ಯದರ್ಶಿ ಶ್ರೀಮತಿ ಸ್ಲೋಬಿನ್ ಸಲ್ದಾನ ರವರು ಕಾರ್ಯಕ್ರಮ ನಿರೂಪಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page