
ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳಾದ ನೀಲಂಬೆನ್ ಪಾರಿಖ್ ನಿಧನರಾಗಿದ್ದಾರೆ.
ಇವರು ಮಹಾತ್ಮ ಗಾಂಧಿಯವರ ಪುತ್ರ ಹರಿದಾಸ್ ಗಾಂಧಿ ಅವರ ಮೊಮ್ಮಗಳು. ಇವರಿಗೆ 93 ವರ್ಷ ವಯಸ್ಸಾಗಿದ್ದು, ಇವರಿಗೆ ಯಾವುದೇ ಕಾಯಿಲೆ ಇರಲಿಲ್ಲ. ಆದರೆ ಕೆಲವು ದಿನಗಳಿಂದ ಊಟ ಮಾಡುವುದನ್ನು ಬಹುತೇಕ ತ್ಯಜಿಸಿದ್ದರು ಎಂದು ಮಗ ಸಮೀರ್ ತಿಳಿಸಿದ್ದಾರೆ. ಇವರು ಗಾಂಧಿವಾದಿಯಾಗಿದ್ದು ಮಹಿಳಾ ಕಲ್ಯಾಣ ಮತ್ತು ಮಾನವ ಸೇವೆಗೆ ಸಮರ್ಪಿತರಾಗಿದ್ದರು.




