
ಉಡುಪಿ: ಮಲ್ಪೆಯ ಜಾಮಿಯಾ ಮಸೀದಿಗೆ ಸೇರಿದ ಕಾಂಪ್ಲೆಕ್ಸ್ ನ ಶೌಚಾಲಯವೊಂದರಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತೆಯಾಗಿದೆ.
ಕಾಂಪ್ಲೆಕ್ಸ್ ನ ಕಟ್ಟಡದ ಮ್ಯಾನೇಜರ್ ಸುಹೇಲ್ ಎಂಬವರು ಒಳಗೆ ಹೋದಾಗ ನವಜಾತ ಶಿಶುವು ಮರಣ ಹೊಂದಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮಹಿಳೆಯೊಬ್ಬಳು ಶೌಚಾಲಯದಲ್ಲಿ ಹೆರಿಗೆಯಾಗಿ ಶಿಶುವನ್ನು ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



