
ಮಂಗಳವಾರ ವೈಟ್ ಹೌಸ್ ವಕ್ತಾರೆ ಕರೋಲಿನ್ ಲೀವಿಟ್ ಅಮೆರಿಕಾದ ಮೇಲೆ ಬೇರೆ ಬೇರೆ ದೇಶಗಳು ಹಾಕ್ತಿರೋ ತೆರಿಗೆಗಳ ಬಗ್ಗೆ ಟೀಕೆ ಮಾಡಿದ್ದು ಅದರಲ್ಲೂ ಭಾರತ ಅಮೆರಿಕದ ಮದ್ಯಕ್ಕೆ 150 ಪರ್ಸೆಂಟ್ ಮತ್ತು ಕೃಷಿ ವಸ್ತುಗಳಿಗೆ 100 ಪರ್ಸೆಂಟ್ ತೆರಿಗೆ ಹಾಕ್ತಿದೆ ಎಂದು ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ಯಾಯವಾದ ಮತ್ತು ಸರಿತೂಗುವ ವ್ಯಾಪಾರ ಪದ್ಧತಿಗಳಿಗೆ ಸಪೋರ್ಟ್ ಮಾಡ್ತಾರೆ ಅಂತಾ ಒತ್ತಿ ಹೇಳಿದ ಅವರು ಕೆನಡಾ ವರ್ಷಗಳಿಂದ ಅಮೆರಿಕಾವನ್ನು ಮತ್ತು ಅಮೆರಿಕನ್ನರನ್ನು ಲೂಟಿ ಮಾಡ್ತಿದೆ ಎಂದು ಹೇಳಿದ್ದಾರೆ.
“ಅಮೆರಿಕದ ಜನರ ಮೇಲೆ ಮತ್ತು ಇಲ್ಲಿನ ನಮ್ಮ ಕೆಲಸಗಾರರ ಮೇಲೆ ಕೆನಡಾ ಹಾಕ್ತಿರೋ ತೆರಿಗೆ ರೇಟ್ಗಳು ತುಂಬಾನೇ ಕೆಟ್ಟದಾಗಿವೆ.
ನಿಜ ಹೇಳಬೇಕಂದ್ರೆ, ಕೆನಡಾ ಮಾತ್ರ ಅಲ್ಲ, ಜಾಸ್ತಿ ತೆರಿಗೆ ರೇಟ್ ಹಾಕೋ ಬೇರೆ ದೇಶಗಳ ಲಿಸ್ಟ್ ನನ್ನ ಹತ್ರ ಇದೆ. ನೀವು ಅಮೆರಿಕದ ಚೀಸ್ ಮತ್ತು ಬೆಣ್ಣೆ ಮೇಲೆ ಕೆನಡಾ ಹಾಕೋ ತೆರಿಗೆ ಆಲ್ಮೋಸ್ಟ್ 300 ಪರ್ಸೆಂಟ್. ಇಂಡಿಯಾನ ನೋಡಿ, ಅಮೆರಿಕದ ಮದ್ಯಕ್ಕೆ 150 ಪರ್ಸೆಂಟ್ ತೆರಿಗೆ ಹಾಕ್ತಾರೆ. ಅದು ಕೆಂಟುಕಿ ಬೋರ್ಬನ್ ತರಹದ ಮದ್ಯವನ್ನು ಇಂಡಿಯಾಗೆ ಎಕ್ಸ್ಪೋರ್ಟ್ ಮಾಡೋಕೆ ಹೆಲ್ಪ್ ಮಾಡುತ್ತಾ? ನಂಗೆ ಹಾಗೇನೂ ಅನಿಸಲ್ಲ. ಇಂಡಿಯಾದಿಂದ ಬರೋ ಕೃಷಿ ವಸ್ತುಗಳಿಗೆ 100 ಪರ್ಸೆಂಟ್ ತೆರಿಗೆ ಹಾಕ್ತಾರೆ” ಎಂದು ಹೇಳಿದ್ದಾರೆ.