
ಮತ್ತೆ ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು 6 ಮಂದಿ ಶವ ಪ್ತತೆಯಾದ ಬಳಿಕ ಪ್ರತಿಭಟನೆ ಭುಗಿಲೆದ್ದಿದೆ. ಪ್ರತಿಭಟನಾಕಾರರು ಸಚಿವರು, ಶಾಸಕರ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು ಮೂವರು ಸಚಿವರು ಮತ್ತು 6 ಶಾಸಕರ ಮನೆಗಳನ್ನು ಹಿಂಸಾತ್ಮಕ ಗುಂಪು ಧ್ವಂಸಗೊಳಿಸಿದೆ. ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಮನೆಗೆ ನುಗ್ಗಲು ಪ್ರಯತ್ನಿಸಿದ್ದಾರೆ.
ಇಂಫಾಲ್‌ನ ವಿವಿಧ ಭಾಗಗಳಲ್ಲಿ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಹಾರಿಸಿದ್ದು ಇಂಫಾಲ್‌ನಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದೆ. ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದ್ದು ಮಣಿಪುರದಲ್ಲಿ ಎರಡು ಚರ್ಚ್ ಸೇರಿದಂತೆ ಹಲವೆಡೆ ಬೆಂಕಿ ಹಚ್ಚಲಾಗಿದೆ.



















