ವೈದ್ಯಕೀಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಹಲವು ಮಕ್ಕಳ ಸಾವಿನ ಬಳಿಕ ಸಿರಪ್ ಬಳಕೆಯ ಕುರಿತು ಆರೋಗ್ಯ ಇಲಾಖೆ ಬಿಡುಗಡೆ ಮಾಡಿತ್ತು.
ಇದೀಗ ವೈದ್ಯಕೀಯ ಶಿಕ್ಷಣ ಇಲಾಖೆ ಕೂಡ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಹೆರಿಗೆ ಆಸ್ಪತ್ರೆಗಳಲ್ಲಿ ವೈದ್ಯರು ಗರ್ಭಿಣಿಯರು ಹಾಗೂ ಬಾಣಂತಿಯರ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.
ಕರ್ನಾಟಕ ಆರೋಗ್ಯ ಇಲಾಖೆಯಿಂದ ಬಿಡುಗಡೆಯಾದ ಮಾರ್ಗಸೂಚಿಯ ಪ್ರಕಾರ, ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ಪತ್ರೆಗಳು ಮಾರ್ಗಸೂಚಿಯನ್ನು ಅನುಸರಿಸುವಂತೆ ಸೂಚಿಸಿದೆ.
ಸಿರಪ್ ಬಳಕೆಯ ಮುಂಜಾಗ್ರತಾ ಕ್ರಮ…
ಆರು ತಿಂಗಳ ಮಗುವಿಗೆ ಕೆಮ್ಮಿದ್ದರೆ ಎದೆ ಹಾಲು ಉಣಿಸಬೇಕು ,ಸಿರಪ್ ನೀಡಬಾರದು.
ಮಗುವಿಗೆ ನ್ಯುಮೋನಿಯಾ ಲಕ್ಷಣ ಕಂಡು ಬಂದಾಗ ಸಿರಪ್ ಬಳಕೆ ಮಾಡಬಾರದು, ವೈದ್ಯರ ಸಲಹೆ ಪಡೆಯಬೇಕು.
ಮಗು ಆರೋಗ್ಯ ತಪ್ಪಿದಾಗ ವೈದ್ಯರ ಭೇಟಿ ಮಾಡಿಯೇ ಔಷಧಿ ನೀಡಬೇಕು.
ಯಾವುದೇ ಸಿರಪ್ ದೀರ್ಘಕಾಲದವರೆಗೆ ಬಳಕೆ ಮಾಡಬಾರದು.






















































