
ಕಾರ್ಕಳ: ಎಸ್.ವಿ. ಟಿ ಆಂಗ್ಲ ಮಾದ್ಯಮ ಶಾಲೆಯ ಭಾರತ್ ಸ್ಕೌಟ್ & ಗೈಡ್ಸ್ ವತಿಯಿಂದ ಮಕ್ಕಳಿಗಾಗಿ “ಕಾನೂನು ಸಂರಕ್ಷಣೆ” ಯ ಬಗ್ಗೆ ಜಾಗೃತಿ ಕಾರ್ಯಗಾರ ನಡೆದಿದ್ದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಹೆಚ್ಚುವರಿ ಪೋಲಿಸ್ ಅಧೀಕ್ಷಕರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸ್ ಹೆಡ್ ಕಾನ್ ಸ್ಟೇಬಲ್ ಆಗಿರುವ ಶ್ರೀಯುತ ಸಂತೋಷ್ ಕಾರ್ಕಳ, ಇವರು ಮಕ್ಕಳಿಗೆ ಕಾನೂನಿನ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಿದರು. ಪೊಲೀಸ್ ಠಾಣಿ ಒಂದು ತೆರೆದ ಮನೆಯಾಗಿದ್ದು ಇಲ್ಲಿ ಯಾವುದು ಹೆದರಿಕೆ, ಅಳುಕು ಇಲ್ಲದೇ ಎಲ್ಲರೂ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅದೇ ರೀತಿ ಆರಕ್ಷಕರು ಯಾವಾಗಲೂ ಮಕ್ಕಳ ಹಾಗೂ ಸಮಾಜದ ಸಹಾಯಕ್ಕೆ ಸಿದ್ಧರಿದ್ದಾರೆ ಎ೦ದು ತಿಳಿಸಿದರು.
ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ನಡೆದು ಯಾವುದೇ ರೀತಿಯ ಪ್ರಲೋಭನೆಗೆ ಒಳಗಾಗದೆ ದೇಶಕ್ಕೆ ಮಾದರಿಯಾಗಬೇಕೆಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸ್ಕೌಟ್ & ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಕಳ, ಇದರ ಕಾರ್ಯದರ್ಶಿ ಗಣೇಶ್ ಜಾಲ್ಸೂರ್, ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಾಲಿನಿ ಕೆ, ಗೈಡ್ಸ್ ಕಾಪ್ಟನ್ ಶ್ರೀಮತಿ ಅಕ್ಷತಾ, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಅಕ್ಷತಾ ನಿರೂಪಿಸಿ, ಶ್ರೀಮತಿ ಜ್ಯೋತಿ ಪಾಠಕ್ ವಂದಿಸಿದರು.




