
ಮಂಜುನಾಥ್ ಬೈಲೂರು ಸಾರಥ್ಯ ದ ‘ಐಸಿರ ಕಲಾವಿದೆರ್,ಬೈಲೂರು’ ಇವರ ಈ ವರ್ಷದ ಕಲಾಕೃತಿ ಬಲೆ ತೆಲಿಪಾಲೆ ,ಬಲೆ ಬುಲಿಪಾಲೆ ಕಲಾವಿದ ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚಿಸಿ ಚೇತನ್ ನೀರೆ ಸಂಭಾಷಣೆ ಹಾಗೂ ನಿರ್ದೇಶನದ ಸಂಗೀತ ಮಾಣಿಕ್ಯ ನಿತಿನ್ ಶೀರ್ಲಾಲು ಸಂಗೀತ ನೀಡಲಿರುವ ಹೊಸ ಭರವಸೆಯನ್ನೋಳಗೊಂಡ “ಡೆನ್ನಾನ” ನಾಟಕದ ಶುಭಮುಹೂರ್ತ ದಿನಾಂಕ 11.07.2024 ರ ಸಂಜೆ ಎರ್ಲಪ್ಪಾಡಿ ಗುರು ಮಂದಿರ ದಲ್ಲಿ ಪ್ರಧಾನ ಅರ್ಚಕರಾದ ಸುಕೇಶ್ ಭಟ್ ಇವರ ನೇತೃತ್ವದಲ್ಲಿ ನಡೆಯಿತು.

ಈ ಶುಭ ಸಂದರ್ಭದಲ್ಲಿ ಎರ್ಲಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಸುನೀಲ್ ಹೆಗ್ಡೆ ಗೋವಿಂದೂರು, ಬೈಲೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ರಾದ ಧರ್ಮರಾಜ್ ಕುಮಾರ್, ಕರಾವಳಿ ಭಜನಾ ಸಂಸ್ಕಾರ ವೇದಿಕೆ ಮಂಗಳೂರು ಇದರ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಎರ್ಲಪ್ಪಾಡಿ ಹಾಗು ಇತರ ಗಣ್ಯರು ತಂಡದ ಮುಖ್ಯಸ್ಥರು ಹಾಗು ಸದಸ್ಯರು ಉಪಸ್ಥಿತರಿದ್ದರು.





