
ಮಂಗಳೂರು ರಿಫೈನರಿ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ (MRPL) ವತಿಯಿಂದ ವಿಜೇತ ವಿಶೇಷ ಶಾಲೆಗೆ ಟ್ರಾಕ್ಸ್ ತೂಫಾನ್ 11+1 ಸೀಟರ್ ಸೌಲಭ್ಯದ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಮಂಗಳೂರು ರಿಫೈನರಿ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಸಿ ಜಿ ಎಮ್ ಅಡ್ಮಿನಿಸ್ಟ್ರೇಶನ್ ಮನೋಜ್ ಕುಮಾರ್ ಎ ಅವರು ದೀಪ ಪ್ರಜ್ವಲಿಸಿ, ಶಾಲಾ ವಾಹನ ಕೀ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ನೆರವೇರಿಸಿದರು.
ಎಂ ಆರ್ ಪಿ ಎಲ್ ನ ಸಾಮಾಜಿಕ ಬದ್ಧತೆ ಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಶ್ರೀ ಮನೋಜ್ ಕುಮಾರ್ ಎ ಇವರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಶ್ರೀ ದುರ್ಗಾ ವಿದ್ಯಾ ಸಂಘದ ಅಧ್ಯಕ್ಷರಾದ ಕೆ.ರಾಧಾಕೃಷ್ಣ ಶೆಟ್ಟಿ, ವಿಜೇತ ವಿಶೇಷ ಶಾಲಾ ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ಸಂಸ್ಥಾಪಕಿ ಡಾ ಕಾಂತಿ ಹರೀಶ್ ಉಪಸ್ಥಿತರಿದ್ದರು.
ವಿಶೇಷ ಶಿಕ್ಷಕಿ ಶ್ರೀಮತಿ ಶ್ರೀನಿಧಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ.ಕಾಂತಿ ಹರೀಶ್ ಸ್ವಾಗತಿಸಿ, ವಿಶೇಷ ಶಿಕ್ಷಕ ಯಮನಪ್ಪ ವಂದಿಸಿದರು. ಶಾಲಾ ಸಿಬ್ಬಂದಿ ವರ್ಗದವರು, ಹಾಗೂ ಮುಗ್ಧ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.




















