
ಮಂಗಳೂರು: ಮಂಗಳವಾರ ತಡರಾತ್ರಿ ನಗರದ ಜಪ್ಪಿನಮೊಗರು ನಡುಮುಗೇರ ಬಳಿ ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು ಪರಿಣಾಮ NSUI ಮುಖಂಡ ಸೇರಿದಂತೆ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ಕಾರು ಡಿವೈಡರ್ ಗೆ ಡಿಕ್ಕಿಯಾಗಿ ಮೋರಿಗೆ ಬಡಿದು ಅವಘಡ ಸಂಭವಿಸಿದ್ದು ಮೃತ ದುರ್ದೈವಿಗಳನ್ನು ಕದ್ರಿ ನಿವಾಸಿ ಅಮನ್ ರಾವ್ ಹಾಗೂ NSUI ಮುಖಂಡ ಓಂ ಶ್ರೀ ಪೂಜಾರಿ ಎಂದು ಗುರುತಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.






















































