
ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಅವರು ಕುಟುಂಬ ಸಮೇತರಾಗಿ ಮಂಗಳೂರಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಅಮ್ಮನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಶಿಲ್ಪಾ ಶೆಟ್ಟಿಯವರ ಮಗ, ಮಗಳು, ತಾಯಿ, ತಂಗಿ ನಟಿ ಶಮಿತಾ ಶೆಟ್ಟಿ ಜೊತೆ ಬಂದು ಕಟೀಲು ದೇವಿಯ ದರ್ಶನ ಪಡೆದು ಮಲ್ಲಿಗೆ ಹೂವು ಹರಕೆ ರೂಪದಲ್ಲಿ ದೇವಿಗೆ ನೀಡಿದ್ದಾರೆ. ಕಟೀಲು ಪರಿಸರದ ಮೊದಲಾಡಿಗುತ್ತುನಲ್ಲಿ ಮೂಲ ಮನೆ ಹೊಂದಿರುವ ಶಿಲ್ಪಾ ಶೆಟ್ಟಿ ಆಗಾಗ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ.









