ಕಥೆ (ಭಾಗ- 26)
ಚೇತನ್ ವರ್ಕಾಡಿ

ಬಡತನದಲ್ಲೇ ಹುಟ್ಟಿ ಬೆಳೆದವಳು ಮಂಗಳ.ತನ್ನ ಮಗಳಿಗೆ ಮಿಥುನ್ನಂತಹ ಶ್ರೀಮಂತ ಹುಡುಗನೊಬ್ಬ ಇನ್ನೇನು ಕೆಲದಿನಗಳಲ್ಲಿ ಅವಳ ಯಜಮಾನನಾಗಿ ಬರುವವನಿದ್ದಾನೆ!ಆತನ ಮೊದಲ ಮಾತಿಗೆ ಆಗಲ್ಲ ಅನ್ನೋ ಮಾತನ್ನು ಮೊದಲ ಬಾರಿ ಹೇಳಲಾಗದೆ!ಹೇಗೋ ಗಂಡನನ್ನು ಮತ್ತು ಮಗಳನ್ನು ಒಪ್ಪಿಸಿ ಮಂಗಳಳನ್ನು ಮಧುವಿನ ಮನೆಗೆ ಕೆಲಸಕ್ಕೆ ಕರೆದುಕೊಂಡು ಹೋಗಲು ಮತ್ತೆ ಮಿಥುನ್ಗೆ ಕರೆ ಮಾಡಿದಳು..
ತಾನು ನೆನೆದಂತೆ ನಡೆಯುತ್ತಿದೆ ಅನ್ನೋ ಖುಷಿಯಲ್ಲಿ ಹೇಗೊ ಆಫೀಸಿಗೆ ರಜ ಹಾಕಿ ಮಂಗಳಳನ್ನು ಕರೆದುಕೊಂಡು ಹೋಗಲು ಹಳ್ಳಿಗೆ ಬಂದವನೆ!ಅಲ್ಲಿಂದ ಮಂಗಳಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಮಧುವಿನ ಮನೆಗೆ ಹೊರಟ.ಹೆತ್ತವರನ್ನು ಬಿಟ್ಟು ಮೊದಲ ಬಾರಿಗೆ ಹೊರಹೋಗುವ ಮಂಗಳಳ ಮುಖದಲೆಲ್ಲಾ ನೋವಿನ ಭಾವ ಎದ್ದು ಕಾಣುತ್ತಿತ್ತು. ಹಳ್ಳಿಯ ಪುಟ್ಟ ಮನೆಯಲ್ಲಿ ಅರಗಿಣಿಯಂತೆ ಅತ್ತಿತ್ತ ಓಡಾಡುತ್ತಿದ್ದ ಮಂಗಳ ಅಂತಹ ದೊಡ್ಡ ಕಾರಿನಲ್ಲೂ ಮೊದಲ ಬಾರಿ ಕುಳಿತ ಅನುಭವ ಒಂದು ಕಡೆಯಾದರೆ ತನ್ನ ಜೀವನಸಂಗಾತಿಯಾಗೋ ಮಿಥುನ್ನ ಪಕ್ಕ ಕುಳಿತು ಹೋಗುವುದು ಇನ್ನೊಂದು ಖುಷಿ.ತನ್ನ ಬಾಳಸಂಗಾತಿಯಾಗುವ ಮಂಗಳ ಪಕ್ಕದಲ್ಲಿದ್ದರೂ ಅದೇನೋ ಕಳೆದುಕೊಂಡವನಂತಿದ್ದ ಮಿಥುನ್ನ ಹಾವಭಾವ ಮಂಗಳ ಅವನ ಮುಖ ನೋಡಿಯೇ ಅರ್ಥ ಮಾಡಿಕೊಳ್ಳುತ್ತಿದ್ದಳು.ಅದೇನೋ ತನ್ನ ಸಮಾಧಾನಕ್ಕೆಂದು ನಗುತ್ತಿದ್ದಾರೋ ಎಂದು ತನ್ನಲ್ಲೇ ಆಲೋಚಿಸುತ್ತಿದ್ದಳು.ಹಳ್ಳಿಯಿಂದ ಹೊರಟ ಕಾರು ಬಂದು ಮಧುವಿನ ಮನೆಯಂಗಳ ಪ್ರವೇಶಿಸಿತು…
ಅದು ದೊಡ್ಡ ಮನೆ,ಮಂಗಳ ಕಾರಿನಿಂದ ಇಳಿದವಳು ಅತ್ತ ಇತ್ತ ಸುತ್ತಲೂ ಒಮ್ಮೆ ಕಣ್ಣುಹಾಯಿಸಿದಳು!ಅವಳು ಹಳ್ಳಿಯಲ್ಲಿ ಕಂಡ ದೊಡ್ಡ ಮನೆಯೆಂದರೆ ಸುಂದರರಾಯರ ಮನೆ ಮಾತ್ರ!ಅದೂ ಕೂಡ ದೂರದಿಂದ ಮಾತ್ರ. ಆದರೆ ಮಧುವಿನ ಮನೆ ಅದರ ೪ ಪಾಲಿನಷ್ಟು ದೊಡ್ಡದಾಗಿತ್ತು. ಇಬ್ಬರೂ ಬಂದು ಇನ್ನೇನು ಒಳಗಡೆ ಹೆಜ್ಜೆ ಹಾಕಬೇಕೆಂದರೆ…….
(ಮುಂದುವರಿಯುವುದು)













