27 C
Udupi
Saturday, April 25, 2026
spot_img
spot_img
HomeBlogಮಂಗಳ

ಮಂಗಳ

ಕಥೆ (ಭಾಗ- 17 )

ಚೇತನ್ ವರ್ಕಾಡಿ

ಹೌದು..ಮಿಥುನ್ ಮತ್ತು ಮಧು ಆಪ್ತಮಿತ್ರರು.ತನ್ನ ಗೆಳೆಯ ಕರೆದ ಕೂಡಲೆ ಹೆಣ್ಣು ನೋಡಲು ಗೆಳೆಯನೊಂದಿಗೆ ಬಂದೇಬಿಟ್ಟ. ಅವರ ಗೆಳೆತನವೆಂದರೆ ಕೇವಲ ಬಾಯಿಮಾತಿನಾದ್ದಾಗಿರಲಿಲ್ಲ,ಜೀವಕ್ಕೆ ಜೀವ ಕೊಡುವಂತಹ ಸ್ನೇಹ ಅದಾಗಿತ್ತು. ಗೆಳೆಯನ ಮಾತಿಗೆ ಓಗೊಟ್ಟು ಯಾವ ಊರು ಅಂತಾನು ಕೇಳದೆ ಕಾರು ಹತ್ತಿ ಹೊರಟವನಿಗೆ ಅರ್ಧ ದಾರಿ ಕಳೆದಾಗಲೆ ತಿಳಿದದ್ದು ತನ್ನ ಗೆಳೆಯ ಕೂಡ ಸೌಂಧರ್ಯಳ ಊರಿನ ಹುಡುಗಿಯನ್ನೆ ಹುಡುಕಿ ಬಂದಿರುವುದಾಗಿ.ಆದರೂ ಖುಷಿ‌ಯಿಂದ ಆ ದಾರಿಯ ಮಧ್ಯೆ ತನ್ನ ಕನಸಿನರಾಣಿ ಮಂಗಳಲ ಮುಖದರ್ಶನ ಆಗಬಹುದೇನೋ ಅನ್ನೊ ಆಲೋಚನೆ ಖುಷಿಯಿಂದ ಬಂದವನಿಗೆ ಮಂಗಳಲ ಮುಖನೋಡುತ್ತಿದ್ದಂತೆಯೆ ತನ್ನ ಹೃದಯದಲ್ಲಿ ಕಟ್ಟಿದ್ದ ಪ್ರೇಮಗೋಪುರವೊಂದು ಕಳಚಿ ಬಿದ್ದ ನೋವು ದು:ಖ ಎಲ್ಲವೂ ಒಂದು ಕ್ಷಣ ಅವನನ್ನು ಕಲ್ಲಾಗಿಸಿತು.ಮಂಗಳ ತಲೆಬಾಗಿ ಚಾ ನೀಡುತ್ತಿದ್ದರೆ ಇತ್ತ ಮಧು ತನ್ನ ಕೈಯನ್ನು ಟ್ರೇಯ ಪಕ್ಕ ಕೊಂಡೊಯುತ್ತಿದ್ದರೆ ಕೈ ನಡುಗುವ ಅನುಭವ….!ಬೆವರಿಳಿದ ದೇಹ ಏನೋ ಕಳೆದುಬಿಟ್ಟೆ ಅನ್ನೊ ಅಸಾಯಕತೆ.ಇದನ್ನೆಲ್ಲಾ ನೋಡುತ್ತಿದ್ದ ಮಿಥುನ್‌ನಿಗೆ ಆಪ್ತಮಿತ್ರನ ನಿಜಗುಟ್ಟು ತಿಳಿಯದೆ ತಮಾಷೆ‌ಯಾಗಿ ಏನೋ ಹುಡುಗೀನ ನಾನು ನೋಡೋಕೆ ಬಂದಿರೋದು ನಾನೆ ಇಷ್ಟು ಆರಾಮವಾಗಿ ಇದ್ದೀನಿ ನಿನ್ಗೆ ಏನಾಯ್ತೋ…!ಎಂದು ಹೇಳಬೇಕಾದರೆ ಏನು ಆಗದವನಂತೆ ಏನು ಇಲ್ಲಕಣೋ ಆಫೀಸ್ ಟೆನ್ಶನ್ ಅಷ್ಟೇ ಎಂದು ಮಾತುಬದಲಾಯಿಸಿದ.ಮಾತುಗಳು ತಮಾಷೆ‌ಯಾಗಿ ದಾರಿ ಬದಲಾಯಿಸಿತು.ಮಿಥುನ್ ಮಂಗಳನನ್ನು ನೋಡುತ್ತಾ ಅವಳ ಕೈಯಲ್ಲಿದ್ದ ಟ್ರೇಯಿಂದ ಚಾ ತೆಗೆದು ಅವಳನ್ನೇ ನೋಡುತ್ತಾ ನಗುಮುಖ ಅರಳಿಸುತ್ತಾ ಚಾ ಕುಡಿಯುತ್ತಿದ್ದ, ತಲೆಬಾಗಿ ನಿಂತಿದ್ದ ತನ್ನ ಬಾಳಸಂಗಾತಿಯಾಗಲು ಅರಸಿ ಬಂದಿರುವ ಯುವಕನನ್ನು ಮೆಲ್ಲನೆ ನೋಡಬೇಕಾದರೆ ಸುಂದರವಾದ ಮೈಕಟ್ಟು ಮುಖದ ತುಂಬಾ ನಗು ಇಬ್ಬರಲ್ಲೂ ಎದ್ದು ಕಾಣುತ್ತಿತ್ತು. ತನ್ನನ್ನು ವರಿಸಲು ಬಂದಿರುವ ರಾಜಕುಮಾರ ಯಾರಾಗಿರಬಹುದು ಎಂದು ಒಂದು ಕ್ಷಣ ಆಲೋಚಿಸಿದರೆ,ಮಧುವಿನ ಮುಖ ಎಲ್ಲೋ ನೋಡಿದ ನೆನಪು ಅವಳಿಗೆ ಬಂತು.ಒಂದು ಕ್ಷಣ ಮಧುವನ್ನು ಆಗೆ ನೋಡುತ್ತಿರಬೇಕಾದರೆ….ಇತ್ತ ಮಧು….?

(ಮುಂದುವರಿಯುವುದು)

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page