
ನವದೆಹಲಿ: ದಿನನಿತ್ಯ ಅಗತ್ಯ ಆಹಾರ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಖುಷಿ ಸುದ್ದಿ ಎಂಬಂತೆ ‘ಭಾರತ್ಬ್ಯಾಂಡ್’ ಅಡಿಯಲ್ಲಿ ಗ್ರಾಹಕರಿಗೆ ಸಬ್ಸಿಡಿ ರೂಪದಲ್ಲಿ ಅಕ್ಕಿ ಹಾಗೂ ಗೋಧಿ ಹಿಟ್ಟಿನ ಮಾರಾಟದ 2ನೇ ಹಂತಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಂಗಳವಾರ ಚಾಲನೆ ನೀಡಿದ್ದಾರೆ.
ಇದರಲ್ಲಿ ಗೋಧಿ ಹಿಟ್ಟು ಪ್ರತಿ ಕೇಜಿಗೆ 30 ರು., ಅಕ್ಕಿ 34 ರು. ನಿಗದಿಪಡಿಸಲಾಗಿದ್ದು ಎನ್ ಸಿಸಿಎಫ್, ನಾಫೆಡ್ ಮತ್ತು ಕೇಂದ್ರೀಯ ಭಂಡಾರ್ ಹಾಗೂ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳ ಮೂಲಕ 5 ಕೇಜಿ ಗೋಧಿ ಮತ್ತು 10 ಕೇಜಿ ಅಕ್ಕಿ ಚೀಲಗಳನ್ನು ಗ್ರಾಹಕರು ಖರೀದಿಸಬಹುದಾಗಿದೆ. ಅಲ್ಲದೆ, ಕೆಲವು ಮಾಲ್ಗಳಲ್ಲಿ ಇವು ಲಭ್ಯವಿರಲಿದ್ದು ಜತೆಗೆ ಮಹಾನಗರಗಳಲ್ಲಿ ಚಿಕ್ಕ ಗೂಡ್ಸ್ ಆಟೋಗಳ ಮೂಲಕ ಅಲ್ಲಲ್ಲಿ ಇವುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಮೊದಲ ಹಂತದ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಗೋಧಿ ಹಿಟ್ಟಿನ ದರ 2.5 ರು., ಅಕ್ಕಿ ದರವನ್ನು 5 ರು. ಏರಿಸಲಾಗಿದೆ.






















































