ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾದ ನೊಅ ಜೋ ಪಾಯ್ಸ್ ರವರಿಗೆ ಸನ್ಮಾನ

ಕಾರ್ಕಳ ನಗರ ಬಿಜೆಪಿ ವತಿಯಿಂದ ವಿಲ್ಫ್ರೆಡ್ ಪಾಯಸ್ ಮತ್ತು ಜೆನಿಫರ್ ಪಾಯಸ್ ದಂಪತಿಗಳ ಸುಪುತ್ರ ನಿಟ್ಟೆಯ ಡಾ. ಎನ್ ಎಸ್ ಎ ಎಂ ಇಂಗ್ಲೀಷ್ ಮೀಡಿಯಂ ಶಾಲೆಯ 4ನೇ ತರಗತಿ ವಿದ್ಯಾರ್ಥಿ ನೊಅ ಜೋ ಪಾಯಸ್ ಇವರಿಗೆ ಮಿಲೆನಿಯಂ ವರ್ಲ್ಡ್ ಸ್ಕೂಲ್ ಹಾಸನದಲ್ಲಿ ನಡೆದ ಸೌತ್ ಜೋನ್ 2 ಈಜು ಸ್ಪರ್ಧೆಯ 50 ಮೀ ಫ್ರೀಸ್ಟೈಲ್ (ಅಂಡರ್-11) ವಿಭಾಗದಲ್ಲಿ ರಜತ ಪದಕ ಗಳಿಸಿ , CBSE ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಕ್ಕೆ ಸನ್ಮಾನಿಸಲಾಯಿತು.
ಕಾರ್ಕಳ ಬಿಜೆಪಿ ವಕ್ತಾರರಾದ ಶ್ರೀ ರವೀಂದ್ರ ಮೊಯಿಲಿಯವರು ಮಾತನಾಡಿ ನೊಅ ಅವರು ಈಜು ಕ್ರೀಡೆಯಲ್ಲಿ ಹೆಸರು ಮಾಡಲು ತಂದೆ ತಾಯಿಯವರ ಪ್ರೋತ್ಸಾಹ ಮತ್ತು ನೊಅ ಅವರ ಉತ್ಸಾಹವೇ ಹಾಗೂ ಈಜು ಕಲಿಸಿದ ಗುರುಗಳು ಕಾರಣ ಮತ್ತು ಇದು ಇತರರಿಗೂ ಪ್ರೇರಣೆಯಾಗಲಿ ಎಂದರು.
ಈ ಸಂದರ್ಭ ಕಾರ್ಕಳ ನಗರ ಬಿಜೆಪಿ ಅಧ್ಯಕ್ಷರಾದ ನಿರಂಜನ್ ಜೈನ್, ಹಿರಿಯ ನಾಯಕರಾದ ಪ್ರಕಾಶ್ ರಾವ್, ಮಾಜಿ ಪುರಸಭಾ ಉಪಾಧ್ಯಕ್ಷರಾದ ಟಿ ಗಿರಧರ್ ನಾಯಕ್ , ಪುರಸಭಾ ಸದಸ್ಯರಾದ ಮೀನಾಕ್ಷಿ ಗಂಗಾಧರ್, ನಗರ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ರಾಜೇಶ್ ಕೋಟ್ಯಾನ್, ಬಿಜೆಪಿ ವಾರ್ಡ್ ಅಧ್ಯಕ್ಷರಾದ ಸುನಿಲ್ ಕೋಟ್ಯಾನ್, ಯುವಮೋರ್ಚಾ ನಗರ ಅಧ್ಯಕ್ಷರಾದ ಅಮರ್ ಶೆಟ್ಟಿಗಾರ್, ನಗರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ ಉಪಸ್ಥಿತರಿದ್ದರು.






















































