
ಬ್ಲಾಕ್ ಕಾಂಗ್ರೆಸ್ ಕಾರ್ಕಳ ಅಲ್ಪಸಂಖ್ಯಾತ ಘಟಕದ ಆಶ್ರಯದಲ್ಲಿ ವಿವಿಧ ಇಲಾಖೆಯ ವತಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಗಾರವು ಜಾಮೀಯ ಶಾದಿ ಮಹಲ್ ಸಾಲ್ಮರ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮಾತನಾಡಿ ರಾಜ್ಯ ಕಾಂಗ್ರೆಸ್ ಸಿದ್ದರಾಮಯ್ಯ ಸರಕಾರವು ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ಅನೇಕ ಉತ್ತಮ ಯೋಜನೆಯನ್ನು ಜಾರಿಗೆ ತಂದು ಕೋಟ್ಯಾಂತರ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸುತಿದೆ ಅಲ್ಪಸಂಖ್ಯಾತ ಬಂದುಗಳು ಜಾರಿಯಾದ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಬ್ಲಾಕ್ ಅಧ್ಯಕ್ಷ ಶುಭದರಾವ್ ಮಾತನಾಡಿ ಅಲ್ಪಸಂಖ್ಯಾತರಿಗೆ ಇಲಾಖೆಯ ವತಿಯಿಂದ ಸಿಗುವ ಎಲ್ಲಾ ಸೌಲಭ್ಯಗಳು ಮತ್ತು ಬಿಡುಗಡೆಯಾಗುವ ಅನುದಾನಗಳ ಸರಿಯಾದ ಬಳಕೆಯಾಗಬೇಕಾದರೆ ಅವುಗಳ ಬಗ್ಗೆ ಸೂಕ್ತ ಮಾಹಿತಿಯ ಅಗತ್ಯವಿದೆ ಮಾಹಿತಿ ಕೊರತೆಯಿಂದ ಅನುದಾನಗಳು ಸರಕಾರಕ್ಕೆ ಹಿಂದೆ ಹೋಗುವ ಪ್ರಕರಣಗಳನ್ನು ನೋಡಿದ್ದೇವೆ ಹಾಗಾಗಿ ಈ ಮಾಹಿತಿ ಕಾರ್ಯಗಾರವನ್ನು ಆಯೋಜನೆ ಮಾಡಲಾಗಿದೆ ಎಂದರು.
ಅಲ್ಪಸಂಖ್ಯಾತ ಮುಖಂಡರಾದ ಎಂ.ಪಿಮೊಹಿದ್ದೀನ್ ,ಪುರಸಭಾ ಸದಸ್ಯ ಜಮಾತ್ ಅಧ್ಯಕ್ಷರಾದ ಆಶ್ಪಕ್ ಆಹಮ್ಮದ್, ಕಾನೂನು ಘಟಕದ ಅಧ್ಯಕ್ಷರಾದ ರೆಹಮ್ಮತ್ತುಲ್ಲಾ, ಬ್ಲಾಕ್ ಉಪಾದ್ಯಕ್ಷ ಜಾರ್ಜ್ ಕ್ಯಾಸ್ಟಲೀನೊ, ಸೊಲೊಮನ್ ಅಲ್ವಾರಿಸ್, ಸಂಧರ್ಬೋಜಿತ ಮಾತುಗಳನ್ನಾಡಿದರು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಿಬಂದಿ ದೀಪಾ ಸೌಲಭ್ಯಗಳ ಬಗ್ಗೆ ಮಾಹಿತಿ ಹಾಗೂ ಸಂವಾದವನ್ನು ನಡೆಸಿಕೊಟ್ಟರು.
ಈ ಸಂದರ್ಬದಲ್ಲಿ ಕಾರ್ಮಿಕ ಘಟಕದ ಅಧ್ಯಕ್ಷ ವಲೇರಿಯನ್ ಪಾಯಸ್, ಸೇವಾದಳದ ಅಧಕ್ಷ ಅಬ್ದುಲ್ಲಾ ಸಾಣೂರು, NNO ಮೇಲ್ವಿಚಾರಕ ಫರ್ಮನ್ ಉಪಸ್ಥಿತರಿದ್ದರು.
ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಬ್ಬಿರ್ ಮಿಯಾರು ಕಾರ್ಯಕ್ರಮವನ್ನು ನಿರೂಪಿಸಿದರು, ಮುಡಾರು ಗ್ರಾಮಿಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಥ್ವಿರಾಜ್ ಜೈನ್ ಸ್ವಾಗತಿಸಿ, ಯುವ ಕಾಂಗ್ರೆಸ್ ಅಧ್ಯಕ್ಷ ಅತ್ತೂರು ಮಲ್ಲಿಕ್ ಧನ್ಯವಾದವಿತ್ತರು.