31.5 C
Udupi
Thursday, April 30, 2026
spot_img
spot_img
HomeBlogಬೋಳ ಅಕ್ರಮ ಮದ್ಯ ಪತ್ತೆ , ಕಾಂಗ್ರೆಸ್ ಸರಕಾರದಲ್ಲಿ ಮನೆಮನೆಗೆ ಬಾರ್ ಭಾಗ್ಯ..?

ಬೋಳ ಅಕ್ರಮ ಮದ್ಯ ಪತ್ತೆ , ಕಾಂಗ್ರೆಸ್ ಸರಕಾರದಲ್ಲಿ ಮನೆಮನೆಗೆ ಬಾರ್ ಭಾಗ್ಯ..?

ಅಬಕಾರಿ ಇಲಾಖೆಯ ದಿಟ್ಟ ಕಾರ್ಯಚರಣೆಯ ಶ್ಲಾಘನೀಯ: ರವೀಂದ್ರ ಮೊಯ್ಲಿ

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದ ಮೇಲೆ ಅಕ್ರಮ ಚಟುವಟಿಕೆಗಳು ಗರಿ ಗೆದರಿವೆ ಎಂದು ಜನರಾಡಿಕೊಳ್ಳುತ್ತಿದ್ದು, ಇದಕ್ಕೆ ಪುಷ್ಟೀಕರಿಸುವ ರೀತಿಯಲ್ಲಿ ಕಾರ್ಕಳ ತಾಲ್ಲೂಕಿನ ಬೋಳಾ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ,ಬೋಳಾ ಗ್ರಾಮ ಪಂಚಾಯಿತ್ ನ ಮಾಜಿ ಅಧ್ಯಕ್ಷ , ಬೋಳಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷನ ಮನೆಯಿಂದ ಅಬಕಾರಿ ಇಲಾಖೆಯ ಪೊಲೀಸರು ದಾಳಿ ಮಾಡಿ 15 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ಜಪ್ತಿ ಮಾಡಿರುವ ಬಗ್ಗೆ ವರದಿಯಾಗಿದ್ದು ಇದರ ಮೂಲದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ತಿಳಿಸಿದ್ದಾರೆ.


ಈ ಹಿಂದೆ ವೈನ್ ಮರ್ಚಂಟ್ ಅಸೋಸಿಯೇಷನ್ ನ ಸದಸ್ಯರು ಕಾಂಗ್ರೆಸ್ ಸರ್ಕಾರ ನಮ್ಮಿಂದ ₹700 ಕೋಟಿ ಹಣವನ್ನು ಲೂಟಿ ಹೊಡೆದಿದೆ ಎಂದು ಆರೋಪಿಸಿದ್ದು , ಇದರ ನಡುವೆಯೇ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ಕಾಂಗ್ರೆಸ್‌ ಮುಖಂಡನ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ.
ವೈನ್ ಮರ್ಚೆಂಟ್ ಅಸೋಸಿಯೇಷನ್‌ಗೆ ಪರ್ಯಾಯವಾಗಿ ಕಾಂಗ್ರೆಸ್‌ ಸರ್ಕಾರ ತನ್ನ ಮುಖಂಡರ ಮೂಲಕ ಅಬಕಾರಿ ವ್ಯವಹಾರ ನಡೆಸುವ ಸಂಚು ರೂಪಿಸಿದೆಯೇ ಎನ್ನುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ.
ಅಬಕಾರಿ ಹಗರಣ ಸುಳ್ಳು ಎಂದು ವಾದಿಸುತ್ತಿರುವ ಸಿಂ ಸಿದ್ದರಾಮಯ್ಯನವರೇ, ಒಬ್ಬ ವ್ಯಕ್ತಿಯ ಮನೆಯಲ್ಲಿ ಇಷ್ಟು ಮೊತ್ತದ ಮದ್ಯ ಕಳ್ಳಸಂಗ್ರಹಣೆಯಾಗಿದೆ ಎಂದರೆ ಅರ್ಥವೇನು ?
ಈ ರೀತಿ ದಾಸ್ತಾನು ಮಾಡುವುದಕ್ಕೆ ನೀವು ಅನಧಿಕೃತ ಪರವಾನಗಿ ನೀಡಿದ್ದೀರಾ ? ಈ ದೋ ನಂಬರ್ ಮದ್ಯದ ವಹಿವಾಟು ಎಷ್ಟು ಕೋಟಿ ರೂ. ಮೊತ್ತದ ಹಗರಣ ? ಅನ್ಯ ರಾಜ್ಯದ ಚುನಾವಣೆಗೋ ಅಥವಾ ನಿಮ್ಮದೇ ಪಕ್ಷದ ಶಾಸಕರ ಖರೀದಿಗೆ ನಡೆಸುತ್ತಿರುವ ಅಕ್ರಮ ಚಟುವಟಿಕೆಯೋ ? ಕಾಂಗ್ರೆಸ್ ಸರ್ಕಾರದಲ್ಲಿ ಮನೆಮನೆಗೆ ” ಬಾರ್ ಭಾಗ್ಯ” ಕೊಡುತ್ತೀರಾ ?
ಉಪ ಚುನಾವಣೆಯಲ್ಲೂ ಕಾಂಗ್ರೆಸ್‌ ಅಕ್ರಮವಾಗಿ ಮದ್ಯ ಹಂಚಿರುವುದನ್ನು ಅಲ್ಲಗಳೆಯುವಂತಿಲ್ಲ.
ಅಬಕಾರಿ ಇಲಾಖೆಯ ದಿಟ್ಟ ಕಾರ್ಯಾಚರಣೆಯು ಶ್ಲಾಘನೀಯವಾಗಿದ್ದು ಇದನ್ನು ಕಾರ್ಕಳ ಬಿಜೆಪಿಯು ಅಭಿನಂದಿಸುತ್ತಿದೆ. ಅಬಕಾರಿ ಇಲಾಖೆಯು ಯಾವುದೇ ಒತ್ತಡಕ್ಕೆ ಮಣಿಯದೆ ಗೋವಾದಿಂದ ಕಾರ್ಕಳಕ್ಕೆ ಈ ಮದ್ಯ ಹೇಗೆ ಬಂತು? ಇದರ ಹಿಂದಿರುವ ಪ್ರಭಾವಿ ವ್ಯಕ್ತಿಗಳು ಯಾರು? ಎನ್ನುವ ಬಗ್ಗೆ ತನಿಖೆ ನಡೆಸಿ ಪತ್ತೆ ಹಚ್ಚುವ ಕಾರ್ಯ ಮಾಡಬೇಕು ಎಂದು ಕಾರ್ಕಳ ಬಿಜೆಪಿಯು ಆಗ್ರಹಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page