
ಬೈಲೂರು ವಲಯದ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರು, ಸುಮಾರು 35 ವರ್ಷಗಳಿಂದ ನೀರೆ ಬೈಲೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗಣಪತಿ ವಿಗ್ರಹ ತಯಾರಕರಾಗಿ ಸೇವೆ ಸಲ್ಲಿಸುತ್ತಾ, ಚಿನ್ನದ ಕೆಲಸವನ್ನು ಕುಲ ಕಸುಬಾಗಿ ನಡೆಸುತ್ತಾ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದ ಜಿ. ರಾಘವೇಂದ್ರ ಆಚಾರ್ಯ ಬೈಲೂರು (ವಯಸ್ಸು 77) ಇವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ .
ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ನಾಳೆ ಬೆಳಿಗ್ಗೆ 11.30 ಗಂಟೆಯ ನಂತರ ಬೈಲೂರು ಹೈಸ್ಕೂಲ್ ಬಳಿಯಿರುವ ಅವರ ಸ್ವಗೃಹದಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಹಾಗೂ ಆ ನಂತರ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.



















