
ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಿ, ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿ ಬಾಂಬ್ ಇಟ್ಟ ವಿಚಾರವೊಂದು ಸುದ್ದಿಯಾಗಿದೆ.
ಹರಿಯಾಣದ ಶಾಲೆ ಒಂದರಲ್ಲಿ ಶಿಕ್ಷಕರು ಬೈದರೆಂಬ ಕಾರಣಕ್ಕೆ ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಿದಷ್ಟೇ ಅಲ್ಲದೆ, ಸ್ನೇಹಿತರ ಜೊತೆ ಸೇರಿ ಅದನ್ನು ಶಿಕ್ಷಕಿಯ ಕುರ್ಚಿಯಡಿಯಿಟ್ಟು ಸಿಡಿಸಿರುವ ಘಟನೆ ನಡೆದಿದೆ. ಈ ವಿಚಾರದಲ್ಲಿ 13 ವಿದ್ಯಾರ್ಥಿಗಳನ್ನು ಅಮಾನಾತು ಗೊಳಿಸಲಾಗಿದೆ.
ಯೂಟ್ಯೂಬ್ ನಿಂದ ಸ್ಪೋಟಗಳನ್ನು ತಯಾರಿಸುವುದನ್ನು ವಿದ್ಯಾರ್ಥಿಗಳು ಕಲಿತಿದ್ದು, ಶಾಲೆಯಲ್ಲಿ ಘಟನೆ ನಡೆದಿದೆ .ಮಕ್ಕಳನ್ನು ಶಾಲೆಯಿಂದ ಹೊರ ಹಾಕುವ ಚಿಂತನೆ ನಡೆಸಿದ್ದೇವೆ, ಆದರೆ ಪಾಲಕರು ಕ್ಷಮೆ ಯಾಚಿಸಿದ್ದು ವಿದ್ಯಾರ್ಥಿಗಳು ಮುಂದೆ ಇಂತಹ ಕೆಲಸ ಮಾಡುವುದಿಲ್ಲ ಎಂದು ಭರವಸೆ ನೀಡಿದ ಕಾರಣ ಒಂದು ವಾರ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



















