
ಬೆಂಗಳೂರು : ನಗರದಲ್ಲಿ ಪಬ್ ಬಾರ್ ರೆಸ್ಟೋರೆಂಟ್ ಗಳನ್ನು ರಾತ್ರಿ 2 ಗಂಟೆವರೆಗೆ ತೆರೆಯಲು ಅವಕಾಶ ನೀಡುವಂತೆ ಹೋಟೆಲ್ ಮಾಲೀಕರ ಸಂಘ ಅಬಕಾರಿ ಸಚಿವರಿಗೆ ಮನವಿ ಮಾಡಿದೆ.
ನಾವು 18 ಶೇ. ಹೆಚ್ಚಳ ಜಿಎಸ್‌ಟಿ ಕಟ್ಟುತ್ತಿದ್ದೇವೆ. ಬಾಡಿಗೆ, ಗ್ಯಾಸ್, ಸಿಬ್ಬಂದಿ ನಿರ್ವಹಣೆ, ವೆಚ್ಚ ದುಬಾರಿಯಾಗುತ್ತಿದೆ ಇನ್ನು ಉದ್ಯಮಕ್ಕೆ ಲೈಸೆನ್ಸ್ ಪಡೆಯುವ ಪ್ರಕ್ರಿಯೆ ಕೂಡ ಸರಿಯಾಗಿ ನಡೆಯುತ್ತಿಲ್ಲ. ಈ ಎಲ್ಲಾ ಕಾರಣವದಿಂದ ತಮಗೆ ಮಧ್ಯರಾತ್ರಿ ಎರಡು ಗಂಟೆಯವರೆಗೆ ಅವಧಿ ವಿಸ್ತರಣೆಗೆ ಅವಕಾಶ ಕಲ್ಪಿಸಬೇಕು ಎಂದು ಹೋಟೆಲ್ ಮಾಲೀಕರ ಸಂಗಮನವಿಯಲ್ಲಿ ತಿಳಿಸಿದೆ.





