
ರಾಜ್ಯದಲ್ಲಿ ಸುಮಾರು 60 ಸಾವಿರ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದ ಹಾಗೆ ಎಪಿಎಲ್ ಕಾರ್ಡ್ ಆಗಿ ಬದಲಾಗುವ ಮೂಲಕ ಸರಕಾರ ಬಿಪಿಎಲ್ ಕಾರ್ಡ್ ದಾರರಿಗೆ ಶಾಕ್ ನೀಡಿದೆ.
ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆಗೆ ರಾಜ್ಯ ಸರಕಾರ ಮುಂದಾಗಿದ್ದು ಅದರಂತೆ ಅನರ್ಹ ಕಾರ್ಡುಗಳನ್ನು ರದ್ದುಗೊಳಿಸುವುದಾಗಿ ಈಗಾಗಲೇ ಸೂಚನೆ ನೀಡಿತ್ತು. ಇದೀಗ ಆದಾಯ ತೆರಿಗೆ ಪಾವತಿ ಮಾಡುವವರು ವಾರ್ಷಿಕ ಆದಾಯ 1.2 ಲಕ್ಷಕ್ಕಿಂತ ಹೆಚ್ಚು ಇದ್ದಲ್ಲಿ ಅಂತಹ ಕಾರ್ಡುಗಳನ್ನು ರದ್ದುಗೊಳಿಸಲಾಗುವುದು ಎಂದು ಹೇಳಲಾಗಿತ್ತು. ಅದರಂತೆ ಇದೀಗ ಸುಮಾರು 12 ಲಕ್ಷ ಅನರ್ಹ ಕಾರ್ಡುಗಳನ್ನು ಪತ್ತೆ ಮಾಡಿ ಏಕಾಏಕಿ 60,000 ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲಾಗಿದೆ. ಗ್ರಾಹಕರು ನ್ಯಾಯಬೆಲೆ ಅಂಗಡಿಗೆ ಹೋಗಿ ಬಯೋಮೆಟ್ರಿಕ್ ಮೇಲೆ ಬೆರಳಿಟ್ಟಾಗಲೇ ಈ ವಿಷಯ ತಿಳಿದು ಬಂದಿದೆ.
ರಾಜ್ಯದಲ್ಲಿ ಪ್ರಸ್ತುತ 25,62,562 ಎಪಿಎಲ್ ಕಾರ್ಡ್ಗಳಿದ್ದು 87,86,886 ಸದಸ್ಯರಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಎಪಿಎಲ್ ಹೊಂದಿರುವ ಪ್ರತಿ ಕಾರ್ಡಿಗೆ ಒಂದು ಕೆ.ಜಿ ಅಕ್ಕಿಗೆ 15 ರೂ.ಗಳಂತೆ 10 ಕೆ.ಜಿ ಅಕ್ಕಿ ನೀಡಲಾಗುತ್ತಿದೆ.



















