
ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ್ದು ಈ ವೇಳೆ ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಬಿಜೆಪಿಯವರು ಬಡವರ ವಿರೋಧಿಗಳು ಗ್ಯಾರಂಟಿ ಯೋಜನೆ ಸಹಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಮೂರುವರೆ ವರ್ಷ ಎಲ್ಲಾ ಗ್ಯಾರಂಟಿ ಇದ್ದೇ ಇರುತ್ತದೆ. ಮುಂದೆ ಮತ್ತೆ ಚುನಾವಣೆ ಬರುತ್ತದೆ. ಆಗಲೂ ನಾವೇ ಗೆಲ್ಲುತ್ತೇವೆ. ಆಗಲೂ ಈ ಗ್ಯಾರಂಟಿ ಮುಂದುವರೆಯುತ್ತದೆ. ಬಿಜೆಪಿ ಬಡವರ ವಿರೋಧಿಗಳು. ಅವರು ಕೊಡೋದೂ ಇಲ್ಲ, ಕೊಟ್ಟವರನ್ನ ಸಹಿಸೋದು ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.






