ಅಧ್ಯಕ್ಷೆ ವಿನಯ.ಡಿ.ಬಂಗೇರ ನೇತೃತ್ವದಲ್ಲಿ, ಸಂಭ್ರಮದ ರಕ್ಷಾ ಬಂಧನ ಹಬ್ಬ ಆಚರಣೆ

ಬಿಜೆಪಿ ಮಹಿಳಾ ಮೋರ್ಚಾ ಕಾರ್ಕಳ ಮಂಡಲದ ವತಿಯಿಂದ ಸಹೋದರತೆಯನ್ನು ಬೆಸೆಯುವ ರಕ್ಷಾ ಬಂಧನ ಹಬ್ಬವನ್ನು ಇಂದು ಮಹಿಳಾ ಮೋರ್ಚಾ ಕಾರ್ಕಳ ಮಂಡಲದ ಅಧ್ಯಕ್ಷರಾದ ಶ್ರೀಮತಿ ವಿನಯ ಡಿ ಬಂಗೇರ ಅವರ ನೇತೃತ್ವದಲ್ಲಿ ಸಮಾಜದಲ್ಲಿ ಮಹಿಳೆಯರ ರಕ್ಷಣೆಯ ಜವಾಬ್ದಾರಿ ನಿರ್ವಹಿಸುತ್ತಿರುವ, ಮಹಿಳೆಯರು ನಿರ್ಭಯವಾಗಿ ಇರಬೇಕಾದರೆ ಇವರೆಲ್ಲರ ಕೊಡುಗೆ ಅಪಾರ ಎಂಬ ದೃಷ್ಟಿಯಿಂದ ಆಟೋ ಚಾಲಕರು, ಮಾಲಕರು, ಬಸ್ ಚಾಲಕರು, ನಿರ್ವಾಹಕರು ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ಕಾರ್ಕಳ ಬಸ್ಟಾಂಡ್, ಕಾರ್ಕಳ ಗ್ರಾಮಾಂತರ ಹಾಗೂ ನಗರ ಪೊಲೀಸ್ ಠಾಣೆಗಳಲ್ಲಿ ಹಾಗೂ ಈ ಬಾರಿ ವಿಶೇಷವಾಗಿ ಮೆಸ್ಕಾಂ ಸಿಬ್ಬಂದಿಗಳಿಗೆ ಆರತಿ ಬೆಳಗಿ,ರಕ್ಷೆಯನ್ನು ಕಟ್ಟಿ, ಸಿಹಿ ತಿಂಡಿ ವಿತರಿಸಿ ಶುಭ ಹಾರೈಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು .
ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಮಾಲಿನಿ ಜೆ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಸುಮಾ ರವಿಕಾಂತ್, ಮಹಿಳಾ ಮೋರ್ಚಾ ಉಪಾಧ್ಯಕ್ಷರುಗಳಾದ ಆಶಾ ದೇವೇಂದ್ರ ಶೆಟ್ಟಿ, ಭಾರತಿ ಅಮೀನ್ , ಕೋಶಾಧಿಕಾರಿ ಸುಚಿತ್ರಾ ಶೆಟ್ಟಿ,ನಗರ ಮಹಿಳಾ ಮೋರ್ಚ ಅಧ್ಯಕ್ಷರಾದ ಮಮತಾ ಸುಭಾಷ್ ಸುವರ್ಣ ಹಾಗೂ ಮಹಿಳಾ ಮೋರ್ಚಾ ಪ್ರಮುಖರಾದ , , ಸುಮಾ ಕೇಶವ್ , ವಿಮಲ ಪೂಜಾರಿ, ನಿರೀಕ್ಷಾ ರಾಜೇಶ್ ಉಪಸ್ಥಿತರಿದ್ದು ಸಹಕರಿಸಿದರು .













