ಗ್ರ್ಯಾಂಡ್ ಫಿನಾಲೆಯಲ್ಲಿ ಅಭಿಮಾನಿಗಳ ಮಹಾಸಂಗಮ

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಯಲ್ಲಿ ಗಿಲ್ಲಿ ನಟ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಶೋ ಆರಂಭದ ನಾಲ್ಕು ವಾರಗಳಿಂದಲೇ ಗಿಲ್ಲಿ ನಟರೇ ಜಯಶಾಲಿಯಾಗಬಹುದು ಎಂಬ ಮಾತುಗಳು ಕೇಳಿಬಂದಿದ್ದು, ಅಂತಿಮವಾಗಿ ಅದೇ ಸತ್ಯವಾಗಿದೆ. ಫಿನಾಲೆಯಲ್ಲಿ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದು, ಅಶ್ವಿನಿ ಗೌಡ ಮೂರನೇ ಸ್ಥಾನ ಪಡೆದಿದ್ದಾರೆ.
ವಿನ್ನರ್ ಆದ ಗಿಲ್ಲಿ ನಟರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ, ಕಾರು ಸೇರಿದಂತೆ ಹಲವು ಉಡುಗೊರೆಗಳು ಲಭಿಸಿದ್ದು ಈ ಜಯದಿಂದ ಅವರ ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮನೆಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲೂ ಶುಭಾಶಯಗಳ ಮಹಾಪೂರವೇ ಹರಿದು ಬಂದಿದ್ದು ಗಿಲ್ಲಿ ನಟರ ಕ್ರೇಜ್ ಮತ್ತೊಮ್ಮೆ ಸ್ಪಷ್ಟವಾಗಿದೆ.



















