
ಬೆಂಗಳೂರು: ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟು ಇದೀಗ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಆಗಿ ಹೊರಹೊಮ್ಮಿದ ಹಳ್ಳಿ ಹೈದ ಹನಮಂತ ಕಪ್ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.
ಇಲ್ಲಿಯವರೆಗೆ ಶೋ ಆರಂಭಗೊಂಡಾಗ ಮನೆಯನ್ನು ಪ್ರವೇಶ ಮಾಡಿದ ಸ್ಪರ್ಧಿಗಳೇ ಬಿಗ್ ಬಾಸ್ ಟ್ರೋಫಿ ಗೆಲ್ಲುತ್ತಿದ್ದರು. ಆದರೆ ಬಿಗ್ ಬಾಸ್ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಗೆದ್ದಿದ್ದು ಇದೇ ಮೊದಲಾಗಿದೆ.
ಟ್ರೋಫಿ ಹಿಡಿದು ವೇದಿಕೆಯಲ್ಲಿ ಮಾತನಾಡಿದ ಹನುಮಂತ, ದೇವರಾಣೆ ನಾನು ಗೆಲ್ಲುತ್ತೇನೆ ಅಂತ ಬಿಗ್ ಬಾಸ್ ಮನೆಗೆ ಬಂದಿರಲಿಲ್ಲ. ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ. ನಾನು ಗೆಲ್ತೀನಿ ಅಂತ ಗೊತ್ತಿದ್ದರೆ ಬಾಯಿ ಪಾಠ ಮಾಡಿಕೊಂಡು ಬರುತ್ತಿದ್ದೆ. ಆದರೆ ಈಗ ಏನು ಮಾತನಾಡಬೇಕು ಅಂತ ಗೊತ್ತಾಗುತ್ತಿಲ್ಲ. ದೇವರು, ಸುದೀಪ್ ಸರ್, ಕನ್ನಡ ನಾಡಿನ ಜನರ ಆಶೀರ್ವಾದದಿಂದ ನಾನು ಗೆದ್ದಿದ್ದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.





















