
ಬಂಟ್ಸ್ ಫೋರಂ ಮೀರಾ–ಭಯಂದರ್ ಇದರ ಬಂಟ ಕೂಟ 2026ರ ಕಾರ್ಯಕ್ರಮವು ಜನವರಿ 24ರಂದು ಉದಯ್ ಶೆಟ್ಟಿ ಮಲಾರ್ ಬೀಡು ಅವರ ಅಧ್ಯಕ್ಷತೆಯಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಡಾ. ಆರ್.ಕೆ. ಶೆಟ್ಟಿ ವೇದಿಕೆ ಸೆಂಟ್ರಲ್ ಪಾರ್ಕ್ ಬ್ಯಾಂಕ್ವೆಟ್ ಹಾಲ್ನಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳ ಸತ್ಕಾರ, ಸಾಧಕರಿಗೆ ಸನ್ಮಾನ, ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಜೊತೆಗೆ ಜಗದೀಶ್ ಶೆಟ್ಟಿ ಕೆಂಚನಕೆರೆ ಅವರ ನಿರ್ದೇಶನದಲ್ಲಿ, ಸಂತೋಷ್ ಡಿ. ಪಲಿಮಾರ್ ಅವರ ರಚನೆಯ ‘ಪನರೆ ಪೊವೊಡ್ಚಿ’ ಎಂಬ ತುಳು ಸಾಂಸಾರಿಕ ಹಾಸ್ಯಮಯ ನಾಟಕದ ಪ್ರದರ್ಶನವೂ ಇರಲಿದೆ.



















