17ನೇ ವರ್ಷದ ಮಕ್ಕಳ ದಿನಾಚರಣೆಯ ಪ್ರಯುಕ್ತ ವಿವಿಧ ಸ್ಪರ್ಧೆಗಳು

ದಿನಾಂಕ 17.11.2024ನೇ ಭಾನುವಾರದಂದು ಫ್ರೆಂಡ್ಸ್ ಸರ್ಕಲ್ (ರಿ.) ಜೋಡುಗರಡಿ ಸಾಣೂರು ಹಾಗೂ ಬಸವಲಿಂಗೇಶ್ವರ ಫ್ರೆಂಡ್ಸ್ ಮಠದ ಕೆರೆ ಇವರ ಸಹಭಾಗಿತ್ವದಲ್ಲಿ 17ನೇ ವರ್ಷದ ಮಕ್ಕಳ ದಿನಾಚರಣೆಯ ಅಂಗವಾಗಿ ಮಠದ ಕೆರೆ ಮೈದಾನ ಸಾಣೂರಿನಲ್ಲಿ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 8 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಬಳಿಕ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ರಾತ್ರಿ 7:30ಕ್ಕೆ ಸಭಾ ಕಾರ್ಯಕ್ರಮದ ನಂತರ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಲಿದೆ. ಆ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ “ಕಣ್ಣ್ ಕಟ್” ಎಂಬ ತುಳು ಸಾಮಾಜಿಕ ಹಾಸ್ಯಮಯ ನಾಟಕ ನಡೆಯಲಿದೆ.



















