ಸರಕಾರಿ ಕಾಮಗಾರಿ ತಡೆಯೊಂದಿಗೆ… ಅಧಿಕಾರದ ದುರ್ಬಳಕೆ
ಅನುದಾನದೊಂದಿಗೆ ಕಾಮಗಾರಿ ಆರಂಭ ಯಾವಾಗ…?: ಸುಮಿತ್ ಶೆಟ್ಟಿ , ಕೌಡೂರು

ಕಾರ್ಕಳ: ಬೈಲೂರಿನ ಉಮಿಕ್ಕಳ ಬೆಟ್ಟದ ಮೇಲೆ ಪ್ರವಾಸೋದ್ಯಮ ಕೇಂದ್ರವಾಗಿದ್ದ ಐತಿಹಾಸಿಕ ಪರಶುರಾಮ ಥೀಂ ಪಾರ್ಕ್ ಅನ್ನು ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಎಂಡ್ ಗ್ಯಾಂಗ್ ನಾನಾ ಸುಳ್ಳು ಸುದ್ದಿ ಸೃಷ್ಟಿಸಿ, ವಿವಾದಗೊಳಿಸಿ ಹಾಳುಗೆಡವಿತ್ತು. ಆದರೀಗ ಅವರ ಆರೋಪಗಳು ಸುಳ್ಳಾಗಿವೆ. ಪ್ರವಾಸೋದ್ಯಮ ದೃಷ್ಟಿಯಿಂದ ಕಾಮಗಾರಿ ಯಾವಾಗ ಆರಂಭ ಮಾಡುತ್ತೀರಿ? ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಮಿತ್ ಶೆಟ್ಟಿ ಕೌಡೂರು ಪ್ರಶ್ನಿಸಿದ್ದಾರೆ.
ಕಾರ್ಕಳದ ಕಾಂಗ್ರೆಸ್ ನವರು ಥೀಂ ಪಾರ್ಕ್ ಕುರಿತು ಸುಳ್ಳು ಸುದ್ದಿ,ಅಪಪ್ರಚಾರ ನಡೆಸಿ ವಿವಾದ ಸೃಷ್ಟಿಸಿದ್ದರು.
ನಮ್ಮದೇ ಸರಕಾರ ಇದೆ ಎನ್ನುವ ಕಾರಣಕ್ಕೆ ಹಣ ಬಿಡುಗಡೆಗೆ ಮಾಡದೆ ಬಾಕುಳಿಸಿಕೊಂಡು,ಒಂದೊಳ್ಳೆ ದೂರಧೃಷ್ಟಿಯ ಯೋಜನೆಯ ಕಾಮಗಾರಿ ಮುಂದುವರೆಯಲು ತಡೆಯೊಡ್ಡಿ ಯೋಜನೆಗೆ ಅಡ್ಡಿಪಡಿಸಿದ್ದರು.
ಖಾಸಗಿ ದೂರಿನ ಅನ್ವಯ ಒಂದು ಸರಕಾರಿ ಕಾಮಗಾರಿ ನಿಲ್ಲಿಸಿದ ಕೀರ್ತಿ ಉದಯ ಶೆಟ್ಟಿ ಆ್ಯಂಡ್ ಗ್ಯಾಂಗ್ ಗೆ ಸಲ್ಲುತ್ತದೆ.
ಕಾಂಗ್ರೆಸ್ ಗೆ ಥೀಂ ಪಾರ್ಕ್ ಬೇಡವಾದರೆ, ಬೈಲೂರಿನ ಜನತೆಗೆ, ಕ್ಷೇತ್ರದ ಜನತೆಗೆ ಬೇಕು. ಪ್ರತಿಮೆ ಪೈಬರ್ ಅಂತ ಅಪಪ್ರಚಾರ ನಡೆಸಿ ಕಾರ್ಕಳದ. ಮಾನವನ್ನು ವಿಶ್ವಮಟ್ಟದಲ್ಲಿ ಹರಾಜು ಹಾಕಿದ ಕಾಂಗ್ರೆಸ್ಸಿಗರು
ಪೈಬರ್ ಅಲ್ಲ ಅಂತಾದ ಮೇಲೆ ಕ್ಷಮೆ ಕೇಳಬೇಕಿತ್ತು..ಸರಕಾರ ಇದೆ ಅಂತ ಅಧಿಕಾರವನ್ನು ಸ್ವಾರ್ಥ ಸಾಧನೆಗೆ ಬಳಸಿಕೊಂಡ ಕಾಂಗ್ರೆಸ್ಸಿಗರು ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡಿದ್ದಾರೆ.
ಯೋಜನೆಯು ಮೂಲ ಒಪ್ಪಂದಂತೆ ಕಾಮಗಾರಿ ಆಗಿದೆಯ ಎಂದು ಖಚಿತ ಪಡಿಸಿಕೊಂಡು ಇಲಾಖೆಗೆ ಹಸ್ತಾಂತರ ಆಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳದೆ ಕಾಂಗ್ರೆಸ್ಸಿಗರು ಹಸ್ತಾಂತರ ಆಗುವ ಮೊದಲೆ ವಿವಾದ ಮಾಡಿದ್ದರು. ಆದರೀಗ ಕಾಂಗ್ರೆಸ್ಸಿನ ಅಪಪ್ರಚಾರ ಸುಳ್ಳೆಂದು ಸಾಬೀತುಗೊಂಡಿದೆ. ತನಿಖೆ ಮುಂದುವರೆಯಲಿ. ನಮ್ಮದೇನು ಆಕ್ಷೇಪವಿಲ್ಲ. ಕಾಮಗಾರಿ ಯಾವಾಗ ಆರಂಬಿಸ್ತಿರಿ? ಯಾವಾಗ ಪಾರ್ಕ್ ಅನ್ನು ಸಾರ್ವಜನಿಕ ವೀಕ್ಷಣೆಗೆ ಬಿಟ್ಟು ಕೊಡ್ತಿರಿ ಅಂತ ಜಿಲ್ಲಾದಿಕಾರಿಗಳು ಹೇಳಬೇಕು ಎಂದವರು ಆಗ್ರಹಿಸಿದ್ದಾರೆ.





