27.9 C
Udupi
Wednesday, February 18, 2026
spot_img
spot_img
HomeBlogಫೆ.18ರಿಂದ 23ರವರೆಗೆ ಮಿಯ್ಯಾರಿನ ಶ್ರೀ ಮಹಾಲಿಂಗೇಶ್ವರ–ಶ್ರೀ ಮಹಾಗಣಪತಿ ದೇವರ ವಾರ್ಷಿಕ ಮಹೋತ್ಸವ

ಫೆ.18ರಿಂದ 23ರವರೆಗೆ ಮಿಯ್ಯಾರಿನ ಶ್ರೀ ಮಹಾಲಿಂಗೇಶ್ವರ–ಶ್ರೀ ಮಹಾಗಣಪತಿ ದೇವರ ವಾರ್ಷಿಕ ಮಹೋತ್ಸವ

ಮಿಯ್ಯಾರು: ಫೆಬ್ರವರಿ 18, 2026ರಿಂದ ಫೆಬ್ರವರಿ 23, 2026ರವರೆಗೆ ಮಿಯ್ಯಾರು ಗ್ರಾಮದ ಶ್ರೀ ಮಹಾಲಿಂಗೇಶ್ವರ ಹಾಗೂ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ವಾರ್ಷಿಕ ಮಹೋತ್ಸವವು ಭಕ್ತಿಭಾವ ಮತ್ತು ಸಂಭ್ರಮದಿಂದ ನಡೆಯಲಿದೆ.

ಬ್ರಹ್ಮಶ್ರೀ ಬೆಳ್ಮಣ್ಣು ದೊಡ್ಡಮನೆ ಸರ್ವೇಶ ತಂತ್ರಿಗಳ ನಿರ್ದೇಶನದಲ್ಲಿ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಲಿದ್ದು ಮಹೋತ್ಸವದ ಅಂಗವಾಗಿ ವಿಶೇಷ ಸೇವೆ ಹಾಗೂ ಪ್ರಸಾದ ವಿತರಣೆ ವ್ಯವಸ್ಥೆಯೂ ಮಾಡಲಾಗಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಗ್ರಾಮಸ್ಥರು, ಸಂಘಟಕರು ಹಾಗೂ ಭಕ್ತಾದಿಗಳು ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ದೇವರ ಕೃಪೆಯಿಂದ ಎಲ್ಲರಿಗೂ ಆರೋಗ್ಯ, ಶಾಂತಿ ಮತ್ತು ಸಮೃದ್ಧಿ ದೊರೆಯಲಿ ಎಂಬುದು ಆಯೋಜಕರ ಆಶಯವಾಗಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page