27 C
Udupi
Monday, March 23, 2026
spot_img
spot_img
HomeBlogಪ್ಯಾರಾಸಿಟಮಾಲ್ ಸೇರಿದಂತೆ ಅನುಮೋದಿಸದ ಔಷಧಿಗಳ ವಿರುದ್ಧ ದೇಶವ್ಯಾಪಿ ಕ್ರಮಕ್ಕೆ ಡಿಜಿಸಿಐ ಸೂಚನೆ

ಪ್ಯಾರಾಸಿಟಮಾಲ್ ಸೇರಿದಂತೆ ಅನುಮೋದಿಸದ ಔಷಧಿಗಳ ವಿರುದ್ಧ ದೇಶವ್ಯಾಪಿ ಕ್ರಮಕ್ಕೆ ಡಿಜಿಸಿಐ ಸೂಚನೆ

ಭಾರತೀಯ ಔಷಧ ಮಹಾ ನಿಯಂತ್ರಕ (ಡಿಜಿಸಿಐ) ಅನುಮೋದನೆ ಇಲ್ಲದೆ ಬಳಕೆಯಲ್ಲಿರುವ ಫಿಕ್ಸ್ಡ್ ಡೋಸ್ ಸಂಯೋಜನೆಗಳ (ಎಫ್‌ಡಿಸಿಗಳು) ವಿರುದ್ಧ ರಾಷ್ಟ್ರವ್ಯಾಪಿ ಪರಿಶೀಲನೆ ಆರಂಭಿಸಿದೆ. ಜನರಿಕ್ ಹೆಸರಿನಲ್ಲಿರುವ ಸುಮಾರು 90 ಔಷಧಿಗಳಿಗೆ ಸಂಬಂಧಿಸಿದಂತೆ ಅವುಗಳಿಗೆ ಅಗತ್ಯ ಅನುಮತಿ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.

ಮಲ್ಟಿ ವಿಟಮಿನ್, ಫಾಲಿಕ್ಆಸಿಡ್, ಪ್ಯಾರಾಸಿಟಮಾಲ್, ಕೋಟ್ರಿಮಜೋಲ್-ಬೀಟಾಮೆಥಾಸೋನ್ ಕ್ರೀಮ್ ಸೇರಿದಂತೆ ಹಲವು ಔಷಧಿಗಳು ಈ ಪಟ್ಟಿಯಲ್ಲಿ ಸೇರಿವೆ. 2025ರ ಲ್ಯಾಬ್ ವರದಿ ಪ್ರಕಾರ, ಅನೇಕ ಔಷಧಿ ಸಂಯೋಜನೆಗಳು ಅನುಮೋದನೆ ಇಲ್ಲದೆ ‘ಹೊಸ ಔಷಧಿ’ ವರ್ಗದಲ್ಲಿ ಬರುತ್ತಿವೆ ಎಂದು ತಿಳಿದುಬಂದಿದೆ.

2019ರಡಿ ಪರವಾನಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಡದ ಹೊರತು ಯಾವುದೇ ಹೊಸ ಔಷಧಿಯನ್ನು ಮಾರುಕಟ್ಟೆಗೆ ತಯಾರಿಸುವಂತಿಲ್ಲ ಎಂದು ಡಿಜಿಸಿಐ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆಯುವ ಪತ್ರದಲ್ಲಿ ತಿಳಿಸಿದೆ.

ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಇದು ಗಂಭೀರ ವಿಷಯವಾಗಿದ್ದು, 1940ರ ಔಷಧಿಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆಯ ನಿಯಮಗಳನ್ನು ಪಾಲಿಸಲಿಲ್ಲ ಎಂಬುದನ್ನು ವರದಿಯು ಸೂಚಿಸಿದೆ ಎಂದು ತಿಳಿಸಿರುವ ಪತ್ರವು, ಇಂತಹ ಅನುಮೋದಿಸಲ್ಪಡದ ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page