ಜುಲೈ 25ರಂದು ಕಾರ್ಕಳದಲ್ಲಿ ನೇರ ಸಂದರ್ಶನ

ಕಾರ್ಕಳ: ಪ್ರಮುಖ ಎಲೆಕ್ಟ್ರಾನಿಕ್ಸ್ ರಿಟೇಲ್ ಸಂಸ್ಥೆಯಾದ ಪೈ ಇಂಟರ್‌ನ್ಯಾಷನಲ್ ವಿವಿಧ ಹುದ್ದೆಗಳ ನೇಮಕಾತಿಗಾಗಿ ಜುಲೈ 25ರಂದು ಕಾರ್ಕಳದ ಶಯನ ಟೆಂಪಲ್ ಸಮೀಪದ ಹೋಟೆಲ್ ಪ್ರಕಾಶ್‌ನಲ್ಲಿ ಸಂದರ್ಶನ ನಡೆಯಲಿದೆ. ಫ್ರೆಶರ್ಸ್ ಹಾಗೂ ಅನುಭವಿ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ನೇಮಕಾತಿ ನಡೆಯಲಿರುವ ಹುದ್ದೆಗಳಲ್ಲಿ ಬ್ರಾಂಚ್ ಮ್ಯಾನೇಜರ್, ಎಚ್‌ಆರ್ ಎಕ್ಸಿಕ್ಯೂಟಿವ್, ಎಸಿ ಟೆಕ್ನಿಷಿಯನ್/ಅಸೋಸಿಯೇಟ್, ಎಕ್ಸಿಕ್ಯೂಟಿವ್ ಸೇಲ್ಸ್, ಅಸಿಸ್ಟೆಂಟ್ ಸೇಲ್ಸ್, ಫ್ಲೋರ್ ಮ್ಯಾನೇಜರ್, ಇ-ಕಾಮರ್ಸ್ ಎಕ್ಸಿಕ್ಯೂಟಿವ್, ಕ್ಯಾಷಿಯರ್ ಹಾಗೂ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಸೇರಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರು ಮತ್ತು ಕಾರ್ಕಳದಲ್ಲಿ ಉದ್ಯೋಗಾವಕಾಶ ಲಭ್ಯವಿದೆ.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಅಥವಾ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು.
ಆಯ್ಕೆಯಾದವರಿಗೆ ಆಕರ್ಷಕ ವೇತನ, ಪ್ರೋತ್ಸಾಹಧನ, ಬೋನಸ್, ವಸತಿ, ವೈದ್ಯಕೀಯ ಸೌಲಭ್ಯ, ಇಎಸ್‌ಐ ಹಾಗೂ ಪಿಎಫ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸಂಸ್ಥೆ ಒದಗಿಸಲಿದೆ.
ಬೆಳಗ್ಗೆ 11:00 ರಿಂದ 4:00 ವರೆಗೆ ಸಂದರ್ಶನ ನಡೆಯಲಿದ್ದು ಅಭ್ಯರ್ಥಿಗಳು ನವೀಕರಿಸಿದ ರೆಸ್ಯೂಮ್, ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಹಾಗೂ ಆಧಾರ್ ಕಾರ್ಡ್ ನಕಲಿನೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ 9606030462, 9108429253 ಸಂಖ್ಯೆಗಳನ್ನು ಸಂಪರ್ಕಿಸಬಹುದು.


















































