
ಕಾರ್ಕಳ: ಬೆಳ್ಮಣ್ಣು ಗ್ರಾಮದ ಪೆರಾಲ್ ಪಾದೆ ಎಂಬಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸುಮಾರು ಹತ್ತು ಎಕರೆಗೂ ಅಧಿಕ ಗುಡ್ಡ ಪ್ರದೇಶವು ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ನಡೆದಿದೆ.
ಅಗ್ನಿಶಾಮಕ ದಳದ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್, ಉಪ ಠಾಣಾಧಿಕಾರಿ ಚಂದ್ರಶೇಖರ್ ಮಾರ್ನಾಡ್, ಭೀಮ್, ರೂಪೇಶ್, ಸುರೇಶ್, ಮುಜಾಂಬಿಕ್ ಮತ್ತಿತರರು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.









