ಕುಕ್ಕುಂದೂರಿನ ಸಮಸ್ತ ಗ್ರಾಮಸ್ಥರಿಂದ ನುಡಿ ನಮನ

ದಿನಾಂಕ 9.11.2025 ನೇ ಭಾನುವಾರದಂದು ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಗುಡ್ಡೆ ಗುತ್ತು ಮನೆತನದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಪೂಜ್ಯನಿಯ ಕೆ.ರತ್ನರಾಜ ಮುದ್ಯ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವ ನುಡಿ ನಮನ ಕಾರ್ಯಕ್ರಮ ನಡೆಯಲಿದೆ.
ಇವರು ಕುಕ್ಕುಂದೂರು ಜನತೆಯ ಪ್ರೀತಿಯ ಕಣ್ಮಣಿ, ಶ್ರಮಜೀವಿ, ಶಿಸ್ತಿನ ಸಿಪಾಯಿ, ಧಾರ್ಮಿಕ ಚಿಂತಕರು ಹಾಗೂ ಕುಕ್ಕುಂದೂರು ಗ್ರಾಮಸ್ಥರ ಅಮೂಲ್ಯ ರತ್ನವಾಗಿದ್ದು ಈ ನುಡಿ ನಮನ ಕಾರ್ಯಕ್ರಮ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಎಲ್ಲರೂ ಪಾಲ್ಗೊಂಡು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕೆಂದು ಕುಕ್ಕುಂದೂರು ಗ್ರಾಮಸ್ಥರು ವಿನಂತಿಸಿದ್ದಾರೆ.
ಸ್ಥಳ: ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣ,ಸಮಯ: 11:00





















































