28.8 C
Udupi
Tuesday, March 24, 2026
spot_img
spot_img
HomeBlogಪಿಂಚಣಿ ಪಡೆಯಲು ಲೈಫ್ ಸರ್ಟಿಫಿಕೇಟ್ ಕಡ್ಡಾಯ..!

ಪಿಂಚಣಿ ಪಡೆಯಲು ಲೈಫ್ ಸರ್ಟಿಫಿಕೇಟ್ ಕಡ್ಡಾಯ..!

ಪ್ರತಿ ವರ್ಷ ನೆವೆಂಬರ್ ತಿಂಗಳಲ್ಲಿ 80 ವರ್ಷ ಮೇಲ್ಪಟ್ಟ ಪಿಂಚಣಿದಾರರು ಕಡ್ಡಾಯವಾಗಿ ಜೀವನ ಪ್ರಮಾಣ ಪತ್ರ ಅಥವಾ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು. ಲೈಫ್ ಸರ್ಟಿಫಿಕೇಟ್ ಸಲ್ಲಿಕೆ ಮಾಡಿದರೆ ಮಾತ್ರ ಪಿಂಚಣಿ ಪಡೆಯಲು ಸಾಧ್ಯವಾಗಲಿದ್ದು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಮತ್ತೊಂದು ಬಯೋಮೆಟ್ರಿಕ್ ಆಧಾರಿತ ಜೀವನ್ ಪ್ರಮಾಣ ಪತ್ರ ಮೂಲಕ ಈ ಪತ್ರ ಸಲ್ಲಿಕೆ ಮಾಡಬಹುದಾಗಿದೆ.

ಈ ವರ್ಷ ಇದರ ಅವಧಿ ಅಕ್ಟೋಬರ್ 1, 2025ರಿಂದ ನವೆಂಬರ್ 30, 2025ರ ವರೆಗೆ ನೀಡಲಾಗಿದ್ದು ಈ ತಿಂಗಳ ಅಂತ್ಯದೊಳಗೆ ಸಲ್ಲಿಕೆ ಮಾಡದಿದ್ದರೆ ಪಿಂಚಣಿ ಮೊತ್ತ ಖಾತೆಗೆ ಜಮೆ ಆಗುವುದಿಲ್ಲ.

ಜೀವನ ಪ್ರಮಾಣಪತ್ರ ಅಥವಾ ಲೈಫ್ ಸರ್ಟಿಫಿಕೇಟ್ ಸಲ್ಲಿಕೆ ಮಾಡುವ ಮೊದಲು ಪ್ರಮುಖವಾಗಿ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪೆನ್ಶನ್ ಪೇಮೆಂಟ್ ಆರ್ಡರ್ (ಪಿಪಿಒ), ಬ್ಯಾಂಕ್ ಖಾತೆ ಸಂಖ್ಯೆ ಸೇರಿ ಬ್ಯಾಂಕ್ ವಿವರ, ಪಿಂಚಣಿ ಹಾಕುತ್ತಿರುವ ಸಂಸ್ಥೆಯ ಹೆಸರು, ವಿಳಾಸ ದಾಖಲೆಗಳನ್ನು ತೆಗೆದಿಟ್ಟುಕೊಂಡು ಬ್ಯಾಂಕ್ ಶಾಖೆ ಮೂಲಕ, ಹತ್ತಿರದ ಒನ್ ಕೇಂದ್ರದ ಮೂಲಕ, ನಾಗರೀಕ ಸೇವಾ ಕೇಂದ್ರದ ಮೂಲಕ, ಪೋಸ್ಟ್ ಆಫೀಸ್ ಡೋರ್ ಸ್ಟೆಪ್ ಬ್ಯಾಂಕಿಂಗ್ ಮೂಲಕವೂ ಸಲ್ಲಿಕೆ ಮಾಡಬಹುದು. ಅರ್ಜಿ ನಮೂನೆ ಭರ್ತಿ ಮಾಡಿ ಪಿಂಚಣಿ ಜಮೆ ಆಗುವ ಬ್ಯಾಂಕ್ ಶಾಖೆ, ಅಥವಾ ಪೋಸ್ಟ್ ಆಫೀಸ್ ಡೋರ್ ಸ್ಟೆಪ್ ಬ್ಯಾಂಕಿಂಗ್ ಸೇವೆ, ಅಥವಾ ನಾಗರೀಕ ಸೇವಾ ಕೇಂದ್ರದ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು.

ಆನ್ಲೈನ್ ಸಲ್ಲಿಕೆ ಮಾಡುವವರು ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಅಥವಾ ಮೊಬೈಲ್ ಮೂಲಕ https://jeevanpramaan.gov.in ಅಧಿಕೃತ ವೆಬ್‌ಸೈಟ್ ಕ್ಲಿಕ್ ಮಾಡಿ ಅಧಾರ್ ಅಥೆಂಟಿಕೇಶನ್ ಮೂಲಕ ಲಾಗಿನ್ ಆಗಬೇಕು. ಬಯೋಮೆಟ್ರಿಕ್ ಸೇರಿದಂತೆ ಕೆಲ ದಾಖಲೆಗಳನ್ನು ಒದಗಿಸಿ ಅಥೆಂಟಿಕೇಶನ್ ಮಾಡಿಸಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಸಬ್‌ಮಿಟ್ ಮಾಡಬೇಕು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page