‘ನಾನು ಯಾರ ಜೊತೆಯೂ ಓಡಿ ಹೋಗಿಲ್ಲ, ಶ್ರೀಧರ್ ನಾಯಕ್ ಗೆ ಏಡ್ಸ್ ಬಂದಿತ್ತು: ಪತ್ನಿ ಜ್ಯೋತಿ ಆಡಿಯೋ ವೈರಲ್

ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶ್ರೀಧರ್ ನಿನ್ನೆ ರಾತ್ರಿ 10 ಗಂಟೆ ಸಮಯದಲ್ಲಿ ಬೆಂಗಳೂರಿನ ಬಾಪಿಸ್ಟ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.. ಶ್ರೀಧರ್ ಅವರು ಪಾರು, ವಧು ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.
ಅವರ ನಿಧನದಿಂದ ಕಿರುತೆರೆ ಲೋಕದಲ್ಲಿ ಸೂತಕದ ಛಾಯೆ ಮೂಡಿದ್ದು, ಇದೀಗ ಶ್ರೀಧರ್ ಪತ್ನಿಯದ್ದು ಎನ್ನಲಾದ ಹಳೆಯ ಆಡಿಯೋ ಒಂದು ಭಾರಿ ವೈರಲ್ ಆಗುತ್ತಿದೆ.
ಈ ಮೊದಲು ಶ್ರೀಧರ್ ಪತ್ನಿ ವಿರುದ್ಧ ಆರೋಪ ಮಾಡಿದ್ದು ಇದಕ್ಕೆ ಪ್ರತಿಯಾಗಿ ಜ್ಯೋತಿ ಈ ಆಡಿಯೋ ಹರಿಬಿಟ್ಟಿದ್ದರು ಎನ್ನಲಾಗಿದೆ. ‘ನಾನು ಸಿಂಗರ್ ಆಗಬೇಕು ಎಂದು ಬಂದವಳು. ನನಗೆ ಯಾರ ಮೇಲೂ ಅಟ್ರ್ಯಾಕ್ಷನ್ ಇರಲಿಲ್ಲ. ಈ ವೇಳೆ ಶ್ರೀಧರ್ ಪರಿಚಯ ಆಯ್ತು. ಆ ಬಳಿಕ ಗೆಳೆತನ ಮೂಡಿತು. ಆ ಬಳಿಕ ಪ್ರೀತಿ ಬೆಳೆಯಿತು. ಶ್ರೀಧರ್ ಪ್ರಪೋಸ್ ಮಾಡಿದ. ಮನೆಯಲ್ಲಿ ಬಂದು ಮಾತನಾಡಿದ. ಆದರೆ, ಜಾತಕ ಕೂಡಲಿಲ್ಲ. ಹೀಗಾಗಿ ಯಾರೂ ಮದುವೆಗೆ ಒಪ್ಪಲೇ ಇಲ್ಲ. ನಾನು ಇಷ್ಟಪಟ್ಟಿದ್ದೆ. ಹೀಗಾಗಿ ನಾವು ಮದುವೆ ಆದೆವು’ ಎಂದು ಮಾತು ಆರಂಭಿಸಿದ ಜ್ಯೋತಿ ಒಂದೇ ತಿಂಗಳಿಗೆ ಶ್ರೀಧರ್ ಬದಲಾದ. ರಿಸ್ಟ್ರಿಕ್ಷನ್ ಹಾಕಲು ಆರಂಭಿಸಿದ. ಇದೆಲ್ಲವೂ ಅಬ್ನಾರ್ಮಲ್ ಆಗಿತ್ತು. 11 ವರ್ಷಗಳ ಹಿಂದಿನ ಮಾತನ್ನು ಈಗ ಹೇಳಲು ಸಾಧ್ಯವಿಲ್ಲ. ಅವನು ನನ್ನನ್ನು ಪ್ರೀತಿಸುತ್ತಾನೆ ಎಂದುಕೊಂಡೆ. ಆದರೆ, ಪ್ರೀತಿಸಿಲ್ಲ. ಇದನ್ನು ಅವನೇ ಒಂದು ದಿನ ಹೇಳಿದ್ದ. ಹೀಗೆಲ್ಲ ಆಯ್ತಾ ಎಂದು ಹೇಳಿದರೆ ಯಾರೂ ನಂಬಲ್ಲ. ಅವನು ಸಾಕಷ್ಟು ಬಾರಿ ಹೊಡೆದಿದ್ದಾನೆ. ಆದರೆ, ನಾನು ಇದನ್ನು ಎಲ್ಲಿಯೂ ಹೇಳಿಕೊಂಡಿಲ್ಲ’ ಎಂದಿದ್ದಾರೆ.
ನಾನು ಯಾರ ಜೊತೆಯೂ ಓಡಿ ಹೋಗಿಲ್ಲ. ನಾನು ಹಾಗೂ ಮಗ ಇಬ್ಬರೇ ಜೀವನ ಮಾಡುತ್ತಿದ್ದೇವೆ. ಒಬ್ಬರ ಜೀವನದಲ್ಲಿ ಇಷ್ಟು ದೊಡ್ಡ ಟ್ರ್ಯಾಜಿಡಿ ನಡೆಯುತ್ತದೆ ಎಂದು ನಾನು ಊಹಿಸಿರಲಿಲ್ಲ. ನಾನು ಅವರ ಕ್ಯಾರೆಕ್ಟರ್ ಮೇಲೆ ಎಂದಿಗೂ ಅನುಮಾನ ಪಟ್ಟಿಲ್ಲ.
ಅವನಿಗೆ ಎಚ್ಐವಿ ಬಂದಿದೆ. ಅಲ್ಲದೆ, ಕ್ಯಾನ್ಸರ್ ಕೂಡ ಬಂದಿದೆ. ತುಂಬಾ ವೈದ್ಯರ ಬಳಿ ಕೇಳಿದ್ದೆ. ಅದಕ್ಕೆ ಏನಾದರೂ ಔಷಧ ಇದೆಯೇ? ಕ್ಯೂರ್ ಮಾಡಬಹುದೇ ಎಂದು ಕೇಳಿದ್ದೆ. ಆಗಲ್ಲ ಎಂದರು. ಅವನಿಗೆ ಸಿಕ್ಕಾಪಟ್ಟೆ ಅಹಂಕಾರ ಇತ್ತು. ದೇವರು ಕೊಟ್ಟ ಎಲ್ಲವನ್ನೂ ಕಳೆದುಕೊಂಡ. ಇದಕ್ಕೆ ಅವನೇ ಕಾರಣ. ನನ್ನ ಕಾರಣಕ್ಕೆ ಏಡ್ಸ್ ಬಂದಿಲ್ಲ’ ಎಂದು ಹೇಳಿದ್ದಾರೆ.






















































