20.6 C
Udupi
Friday, December 19, 2025
spot_img
spot_img
HomeBlogಪದವಿ ಪೂರ್ವ ಶಿಕ್ಷಣದ ಯಶಸ್ವಿಗೆ ಸಮರ್ಥ ಆಯ್ಕೆ, ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪಿ.ಯು ಕಾಲೇಜು

ಪದವಿ ಪೂರ್ವ ಶಿಕ್ಷಣದ ಯಶಸ್ವಿಗೆ ಸಮರ್ಥ ಆಯ್ಕೆ, ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪಿ.ಯು ಕಾಲೇಜು


​ ಶಿಕ್ಷಣ ಕ್ಷೇತ್ರದ ಮಹೋನ್ನತ ಗುರಿಯೊಂದಿಗೆ ಏಳು ಜನ ಅತ್ಯಂತ ಅನುಭವಿ ಉಪನ್ಯಾಸಕರುಗಳೇ ಸೇರಿ ಸ್ಥಾಪಿಸಿದ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ 2022ರಲ್ಲಿ ತನ್ನ ಶಿಕ್ಷಣ ಸೇವೆಯನ್ನು ಉಡುಪಿಗೂ ವಿಸ್ತರಿಸುವ ಯೋಜನೆಯೊಂದಿಗೆ ಕಲ್ಯಾಣಪುರದ ತ್ರಿಶಾ ಪ. ಪೂ. ಕಾಲೇಜಿನ ಶೈಕ್ಷಣಿಕ ಸಹಭಾಗಿತ್ವ ವಹಿಸಿಕೊಂಡಿತು. ಈಗಾಗಲೇ ಪಿ. ಯು ಫಲಿತಾಂಶದಲ್ಲಿ ಆರಂಭಿಕ ವರ್ಷದಲ್ಲೇ ರಾಜ್ಯದ ಗಮನ ಸೆಳೆದ ಕ್ರಿಯೇಟಿವ್ ಸಂಸ್ಥೆ ಉಡುಪಿಯ ಶಾಖೆಯಲ್ಲೂ ಆ ಯಶಸ್ಸನ್ನು ಮುಂದುವರೆಸಿದೆ. ತನ್ನ ಪ್ರಥಮ ವರ್ಷದ ಫಲಿತಾಂಶದಲ್ಲೇ 100% ಗಳಿಸುವುದರ ಜೊತೆಗೆ ಪಿ. ಯು. ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ರ‍್ಯಾಂಕ್ ಗಳಿಸುವ ಮೂಲಕ ಸಂಸ್ಥೆ ಕೀರ್ತಿ ಗಳಿಸಿದೆ. 94 ಮಕ್ಕಳೊಂದಿಗೆ ಪ್ರಾರಂಭವಾದ ವಿದ್ಯಾಸಂಸ್ಥೆಯಲ್ಲಿ ಇಂದು 400ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
​ವಿದ್ಯಾರ್ಥಿಗಳಲ್ಲಿ ಕೇವಲ ಅಂಕ ಗಳಿಕೆಯ ಹಸಿವನ್ನು ಮಾತ್ರ ಬೆಳೆಸದೆ ಜೀವನ ಮೌಲ್ಯಗಳು, ನೈತಿಕತೆ, ಸದ್ವಿಚಾರಗಳನ್ನು ಪ್ರತಿನಿತ್ಯ ಬೋಧಿಸುತ್ತಿರುವುದು ಸಂಸ್ಥೆಯು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ.

​ಉಡುಪಿಯಲ್ಲಿ ಕ್ರಿಯೇಟಿವ್ ಸಂಸ್ಥೆಯ ಯಶಸ್ಸಿನ ಪಯಣ
·​ಸಂಸ್ಥೆ ಪ್ರಾರಂಭದ ವರ್ಷದಲ್ಲೇ 100% ಫಲಿತಾಂಶ
·​ಉತ್ತಮ ವ್ಯವಸ್ಥಿತವಾದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯಗಳು
·​ಪ್ರತ್ಯೇಕ ಅಧ್ಯಯನ ಕೊಠಡಿಗಳು
·​ಪೌಷ್ಠಿಕಾಂಶಯುಕ್ತ ಆಹಾರ, ಹಿತವೆನಿಸುವ ತಿಂಡಿ ತಿನಿಸುಗಳು
·​ಪ್ರತೀ ವಾರವೂ ಮಾದರಿ ಸ್ಪರ್ಧಾತ್ಮಕ ಪರೀಕ್ಷೆಗಳು
·​ಅತ್ಯುತ್ತಮ ಸಂಗ್ರಹ ಹೊಂದಿರುವ ಗ್ರಂಥಾಲಯ
·​ಪ್ರತಿ ದಿನವೂ ಉಪನ್ಯಾಸಕರೊಂದಿಗೆ ಸಂದೇಹ ನಿವಾರಣಾ ಅವಧಿಗಳು
·​ಸ್ಫರ್ಧಾತ್ಮಕ ಪರೀಕ್ಷೆಯ ತರಬೇತಿಗಾಗಿ ಅತ್ಯಂತ ಅನುಭವಿ ಉಪನ್ಯಾಸಕ ವರ್ಗ ಅತೀ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಾತಿ ಪಡೆಯುವ ಜೊತೆಗೆ, AIIMS, JIPMER ನಂತಹ ರಾಷ್ಟ್ರ ಮಟ್ಟದ ಮೆಡಿಕಲ್ ಸಂಸ್ಥೆಯಲ್ಲೂ ಅರ್ಹತೆ ಗಳಿಸಿದ್ದಾರೆ. B.ಈ ಕೋರ್ಸ್ಗಾಗಿ ದೇಶದ ಉನ್ನತ ಸಂಸ್ಥೆಗಳಾಗಿರುವ IIT, , NITನಂತಹ ಸಂಸ್ಥೆಗೂ ಪ್ರವೇಶಾತಿ ಪಡೆಯುವ ಮೂಲಕ ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಸಂಸ್ಥೆ ಅತ್ಯುತ್ತಮ ಯಶಸ್ಸನ್ನು ಸಾಧಿಸಿದೆ.NEET, JEE, CET ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉನ್ನತ ರ‍್ಯಾಂಕ್ ಗಳಿಸುವ ಜೊತೆಗೆ NDA, NATA, IISER, UCEED, VIT ನಂತಹ ಪರೀಕ್ಷೆಗಳಲ್ಲೂ ಮೇಲುಗೈ ಸಾಧಿಸಿರುವುದು ಹೆಮ್ಮೆಯ ವಿಚಾರ.

ಕ್ರಿಯೇಟಿವ್ ಸಂಸ್ಥೆ ಸಮಾಜದ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೂ ಉನ್ನತ ವ್ಯವಸ್ಥೆಯಡಿಯಲ್ಲಿ ಹೈಟೆಕ್ ಸೌಲಭ್ಯದೊಂದಿಗೆ ಪಿ. ಯು. ಶಿಕ್ಷಣ ಹಾಗೂ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ದೊರಕಿಸಿಕೊಡಬೇಕೆಂಬ ಮಹಾದಾಸೆಯಿಂದ ‘ಕ್ರಿಯೇಟಿವ್ ಹೊಂಗಿರಣ’ ಯೋಜನೆಯನ್ನು ರೂಪಿಸುತ್ತಿದೆ.
ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಯೋಜನೆಯ ಅರ್ಹತಾ ಪರೀಕ್ಷೆಯನ್ನು ದಿನಾಂಕ 21-12-2025 ಭಾನುವಾರದಂದು ಅಥಣಿಯ ಶ್ರೀ ಶಾರದಾ ಮಾತಾ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ (ನವೋದಯ ಶಾಲೆ) ಕನಕನಗರ ಮತ್ತು 28-12-2025 ಭಾನುವಾರದಂದು ಸರ್ಕಾರಿ ಪ್ರೌಢ ಶಾಲೆ, ಚಿಕ್ಕೋಡಿ ಬಿ.ಓ. ಕಛೇರಿ ಆವರಣ, ತಾಲೂಕು ಪಂಚಾಯತ್ ಎದುರು(ತಾಲೂಕು ಶಾಲೆ), ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮ ಶಾಲೆಗಳು( ಬ್ಯಾಳಿ ಕಟ್ಟ) ವಾಲ್ಮೀಕಿ ವೃತ್ತ, ಗೋಕಾಕ್ ಹಾಗೂ ಕನಕದಾಸ ಶಿಕ್ಷಣ ಸಮಿತಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯ(ವಿ.ಎಡ್, ಕಾಲೇಜು) ನೆಹರು ನಗರ, ಬೆಳಗಾವಿಯಲ್ಲಿ ಆಯೋಜಿಸಲಾಗಿದೆ.
ಆಯ್ಕೆಯಾದ 150 ಅರ್ಹ ವಿದ್ಯಾರ್ಥಿಗಳು ಕ್ರಿಯೇಟಿವ್ ಸಂಸ್ಥೆಯ ಉಡುಪಿ ಶಾಖೆಯಲ್ಲಿ ಸಂಪೂರ್ಣ ಉಚಿತ ಶಿಕ್ಷಣ ಅಥವಾ ಪ್ರೋತ್ಸಾಹ ಧನದೊಂದಿಗೆ ಪಿ. ಯು ಶಿಕ್ಷಣ ಪಡೆಯುವ ಅವಕಾಶವಿರುತ್ತದೆ. ಈ ಯೋಜನೆಗೆ ವಿಜ್ಞಾನ ವಿಭಾಗ ಸೇರಲಿಚ್ಛಿಸುವ ಯಾವುದೇ ವಿದ್ಯಾರ್ಥಿ www.creativeedu.win ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ನೇರವಾಗಿ ​ಸಮಯ 9.30ಕ್ಕೆ ಸರಿಯಾಗಿ ತಮ್ಮ ಹತ್ತಿರದ ಪರೀಕ್ಷಾ ಕೇಂದ್ರಕ್ಕೆ ಬಂದು ಹಾಜರಾಗಬಹುದು ಎಂದು ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +919606906468

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page